ಬೈರೂತ್: ದಕ್ಷಿಣ ಲೆಬನಾನ್‌ನಲ್ಲಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಕೇಂದ್ರ ಕಚೇರಿಗೆ ಇಸ್ರೇಲ್ ಡ್ರೋನ್ ಒಂದು ಅಪ್ಪಳಿಸಿದೆ. ಆದರೆ, ಘಟನೆಯಿಂದ ಯಾವುದೇ ಸಾವು –ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಲೆಬನಾನ್ ಗಡಿ ಪ್ರದೇಶ ನಕೌರಾದಲ್ಲಿರುವ ಶಾಂತಿಪಾಲನಾ ಪಡೆಯ ಕೇಂದ್ರ ಕಚೇರಿಗೆ ಮಂಗಳವಾರ ಮಧ್ಯಾಹ್ನದ ವೇಳೆ ಇಸ್ರೇಲ್ ಡ್ರೋನ್ ಅಪ್ಪಳಿಸಿದೆ. ಡ್ರೋನ್‌ನಲ್ಲಿ ಬರೀ ಕ್ಯಾಮೆರಾ ಅಳವಡಿಸಲಾಗಿದ್ದು, ಯಾವುದೇ ಸ್ಫೋಟಕ ತುಂಬಿರಲಿಲ್ಲ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದಿದ್ದಾರೆ.
ಆದರೆ, ಲೆಬನಾನ್ ಮೇಲೆ ಡ್ರೋನ್ ಹಾರಿಸುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮಗಳನ್ನು ಇಸ್ರೇಲ್ ಉಲ್ಲಂಘಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದೂ ಶಾಂತಿಪಾಲನಾ ಪಡೆ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತಂತೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.