ADVERTISEMENT

ಕಲ್ಲು ತೂರಾಟ: ಪ್ಯಾಲೆಸ್ಟೀನಿಯರ ಮೇಲೆ ಇಸ್ರೇಲ್‌ ಗುಂಡಿನ ದಾಳಿ, ಬಾಲಕ ಸಾವು

ಏಜೆನ್ಸೀಸ್
Published 25 ಜೂನ್ 2022, 14:15 IST
Last Updated 25 ಜೂನ್ 2022, 14:15 IST
ವೆಸ್ಟ್‌ಬ್ಯಾಂಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ಯಾಲೆಸ್ಟೀನಿಯರತ್ತ ಇಸ್ರೇಲ್‌ ಪಡೆಗಳು ಗುಂಡು ಹಾರಿಸಿದವು –ಎಎಫ್‌ಪಿ ಚಿತ್ರ
ವೆಸ್ಟ್‌ಬ್ಯಾಂಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ಯಾಲೆಸ್ಟೀನಿಯರತ್ತ ಇಸ್ರೇಲ್‌ ಪಡೆಗಳು ಗುಂಡು ಹಾರಿಸಿದವು –ಎಎಫ್‌ಪಿ ಚಿತ್ರ   

ಜೆರುಸಲೇಮ್‌: ವೆಸ್ಟ್‌ಬ್ಯಾಂಕ್‌ನಲ್ಲಿ ಪ್ರತಿಭಟನೆ ನಡೆಸುವ ವೇಳೆ ಕಲ್ಲು ತೂರಾಟದಲ್ಲಿ ತೊಡಗಿದ್ದ ಪ್ಯಾಲೆಸ್ಟೀನರ ಮೇಲೆ ಇಸ್ರೇಲ್‌ ಪಡೆಗಳು ಶನಿವಾರ ಗುಂಡಿನ ದಾಳಿ ನಡೆಸಿದವು. ಈ ಘಟನೆಯಲ್ಲಿ 16 ವರ್ಷದ ಪ್ಯಾಲೆಸ್ಟೀನಿ ಬಾಲಕ ಮೃತಪಟ್ಟಿದ್ಧಾನೆ ಎಂದು ಇಸ್ರೇಲ್‌ ಹಾಗೂ ಪ್ಯಾಲೆಸ್ಟೀನ್ ಅಧಿಕಾರಿಗಳು ಹೇಳಿದ್ದಾರೆ.

‘ರಮಲ್ಲಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೊಹಮ್ಮದ್ ಅಬ್ದಲ್ಲಾ ಹಮೇದ್‌ ಎಂಬ ಬಾಲಕಗೊಂಡಿದ್ದ. ನಂತರ, ಆತನನ್ನು ಇಸ್ರೇಲ್‌ ಪಡೆಗಳು ತಮ್ಮ ವಶಕ್ಕೆ ಪಡೆದವು. ಬಾಲಕ, ಇಸ್ರೇಲ್‌ ಪಡೆಗಳ ವಶದಲ್ಲಿದ್ದಾಗ ಮೃತಪಟ್ಟಿದ್ದಾನೆ’ ಎಂದು ಪ್ಯಾಲಿಸ್ಟೀನ್‌ ಸುದ್ದಿಸಂಸ್ಥೆ ವಫಾ ತಿಳಿಸಿದೆ.

‘ಕಲ್ಲು ತೂರಾಟದಲ್ಲಿ ತೊಡಗಿದ್ದವರತ್ತ ಸೈನಿಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ’ ಎಂದು ಒಪ್ಪಿಕೊಂಡಿರುವ ಇಸ್ರೇಲ್ ಪಡೆಗಳು, ಗಾಯಾಳುವಿನ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.