ADVERTISEMENT

ಕದನ ವಿರಾಮದ ಎರಡನೇ ಹಂತದ ಪ್ರಕ್ರಿಯೆ ಆರಂಭಿಸಿ:ನೆತನ್ಯಾಹುಗೆ ಅಮೆರಿಕ ನಿಯೋಗ ಆಗ್ರಹ

ಏಜೆನ್ಸೀಸ್
Published 25 ಜನವರಿ 2026, 15:38 IST
Last Updated 25 ಜನವರಿ 2026, 15:38 IST
   

ಕೈರೊ: ಹಮಾಸ್‌ ಬಂಡುಕೋರರ ವಿರುದ್ಧದ ಯುದ್ಧ ಅಂತ್ಯಗೊಳಿಸಲು ತಾನು ಪ್ರಸ್ತಾಪಿಸಿರುವ ಕದನ ವಿರಾಮದ ಎರಡನೇ ಹಂತದ ಪ್ರಕ್ರಿಯೆಗಳನ್ನು ಆರಂಭಿಸಿ ಎಂದು ಅಮೆರಿಕದ ನಿಯೋಗವು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಶನಿವಾರ ಆಗ್ರಹಿಸಿದೆ.

ಮಧ್ಯಪ್ರಾಚ್ಯ ದೇಶಗಳ ವ್ಯವಹಾರದ ಸಲಹೆಗಾರರಾದ ಸ್ಟೀವ್‌ ವೆಟ್ಕಾಫ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಳಿಯ ಜರೆಡ್‌ ಕಶ್ನರ್‌ ಅವರ ನೇತೃತ್ವದ ನಿಯೋಗವು ಶನಿವಾರ ನೆತನ್ಯಾಹು ಅವರನ್ನು ಭೇಟಿ ಮಾಡಿತು.

‘ಹಮಾಸ್‌ ವಶದಲ್ಲಿರುವ ಇಸ್ರೇಲ್‌ನ ಮೃತ ನಾಗರಿಕರ ಅವಶೇಷಗಳನ್ನು ಪಡೆದುಕೊಳ್ಳಬೇಕು ಮತ್ತು ಗಾಜಾದಿಂದ ಸೇನೆಯನ್ನು ವಾಪಾಸು ಕರೆಸಿಕೊಳ್ಳುವುದು ಕದನ ವಿರಾಮದ ಎರಡನೇ ಹಂತದ ಪ್ರಕ್ರಿಯೆಗಳಾಗಿವೆ. ಅಮೆರಿಕದ ನಿಯೋಗವು ನೆತನ್ಯಾಹು ಅವರಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.