ADVERTISEMENT

ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ: 40 ಸಾವು

ಏಜೆನ್ಸೀಸ್
Published 9 ಜುಲೈ 2025, 12:52 IST
Last Updated 9 ಜುಲೈ 2025, 12:52 IST
ಇಸ್ರೇಲ್‌ ದಾಳಿಯಿಂದಾಗಿ ಪ್ಯಾಲೆಸ್ಟೀನ್ ಗಡಿಭಾಗದಲ್ಲಿ ಹೊಗೆ ಆವರಿಸಿತ್ತು –  ಎಎಫ್‌ಪಿ ಚಿತ್ರ
ಇಸ್ರೇಲ್‌ ದಾಳಿಯಿಂದಾಗಿ ಪ್ಯಾಲೆಸ್ಟೀನ್ ಗಡಿಭಾಗದಲ್ಲಿ ಹೊಗೆ ಆವರಿಸಿತ್ತು –  ಎಎಫ್‌ಪಿ ಚಿತ್ರ   

ದೀರ್‌ ಅಲ್‌–ಬಲಾಹ್‌ (ಗಾಜಾ ಪಟ್ಟಿ): ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 40 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.

ಮೃತರಾದವರಲ್ಲಿ 17 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ. ಒಂದೇ ಕುಟುಂಬದ 10 ಜನರು ಮೃತಪಟ್ಟಿದ್ದಾರೆ ಎಂದು ನಾಸೇರ್‌ ಆಸ್ಪತ್ರೆ ಬುಧವಾರ ತಿಳಿಸಿದೆ.

ದಾಳಿಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಂಡುಕೋರರು, ಶಸ್ತ್ರಾಸ್ತ್ರ ಸಂಗ್ರಹಗಾರ, ಕ್ಷಿಪಣಿ ಉಡಾವಣಾ ಕೇಂದ್ರ ಸೇರಿದಂತೆ 100ಕ್ಕೂ ಅಧಿಕ ಸ್ಥಳಗಳ ಮೇಲೆ ಇತ್ತೀಚೆಗೆ ದಾಳಿ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.

ADVERTISEMENT

ಬಂಡುಕೋರರು ಮತ್ತು ಶಸ್ತ್ರಾಸ್ತ್ರಗಳನ್ನು ಹಮಾಸ್‌ ನಾಗರಿಕರ ನಡುವೆ ಬಚ್ಚಿಡಲಾಗುತ್ತಿದೆ ಎಂದು ಇಸ್ರೇಲ್ ಆರೋಪಿಸುತ್ತಿದೆ.

ಪಟ್ಟು ಸಡಿಲಿಸದ ಹಮಾಸ್‌

ಇಸ್ರೇಲ್ ಜೆರುಸಲೇಂ (ಎಎಫ್‌ಪಿ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಕದನ ವಿರಾಮಕ್ಕೆ ಪ್ರಯತ್ನಗಳು ನಡೆಯುತ್ತಿದ್ದರೂ ಇಸ್ರೇಲ್ ಮತ್ತು ಹಮಾಸ್‌ ತಮ್ಮ ಪಟ್ಟು ಬಿಡುತ್ತಿಲ್ಲ. ‘ಹಮಾಸ್‌ ಅನ್ನು ಬಗ್ಗು ಬಡಿದು ಅದು ಒತ್ತೆಯಾಳಾಗಿ ಇರಿಸಿಕೊಂಡಿರುವ ತನ್ನ ಪ್ರಜೆಗಳನ್ನು ಕರೆತರುವುದಾಗಿ’ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ‘ಯಾವುದೇ ಕಾರಣಕ್ಕೂ ನಾವು ಶರಣಾಗುವುದಿಲ್ಲ. ಒತ್ತಡ ಹೇರಿದರೆ ಷರತ್ತುಗಳನ್ನು ವಿಧಿಸುತ್ತೇವೆ’ ಎಂದು ಹಮಾಸ್‌ ಹೇಳಿದೆ. ವಾಷಿಂಗ್ಟನ್‌ಗೆ ಭೇಟಿ ನೀಡಿರುವ ನೆತನ್ಯಾಹು ಅವರು ಮಂಗಳವಾರ ಸಂಜೆ ಟ್ರಂಪ್ ಜೊತೆ ಎರಡನೇ ಸುತ್ತಿನ ಮಾತುಕತೆ ನಡೆಸಿದರು. ಆದರೆ ಕದನವಿರಾಮ ಒಪ್ಪಂದ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.