ADVERTISEMENT

ಗಾಜಾದ ರಫಾದ ಮೇಲೆ ಇಸ್ರೇಲ್ ದಾಳಿ: ಒಂದೇ ಕುಟುಂಬದ 12 ಮಂದಿ ಸಾವು

ರಾಯಿಟರ್ಸ್
Published 22 ಫೆಬ್ರುವರಿ 2024, 7:15 IST
Last Updated 22 ಫೆಬ್ರುವರಿ 2024, 7:15 IST
<div class="paragraphs"><p>ಗಾಜಾದಲ್ಲಿ&nbsp;ಕದನ ವಿರಾಮಕ್ಕೆ ಕರೆ ನೀಡುತ್ತಿರುವ ಜನರು&nbsp;</p></div>

ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುತ್ತಿರುವ ಜನರು 

   

ಚಿತ್ರ ಕೃಪೆ–ರಾಯಿಟರ್ಸ್

ರಫಾ (ಗಾಜಾ): ಇಸ್ರೇಲ್ ಗಾಜಾದ ದಕ್ಷಿಣದಲ್ಲಿರುವ ರಫಾದ ಮೇಲೆ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ. ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ 12 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ಯುದ್ಧದಲ್ಲಿ ಈವರೆಗೆ 29,313 ಮಂದಿ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ ಆರೋಗ್ಯ ಸಚಿವಾಲಯ ಹೇಳಿದೆ.

ಹಮಾಸ್‌ ಬಂಡುಕೋರರು ದಕ್ಷಿಣ ಇಸ್ರೇಲ್‌ ಮೇಲೆ 2023ರ ಅಕ್ಟೋಬರ್‌ 7ರಂದು ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ತೀವ್ರ ದಾಳಿ ನಡೆಸುತ್ತಿದೆ.

ಗಾಜಾ ಸ್ಮಶಾನಭೂಮಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಹಾಗೂ ವಿವಿಧ ರಾಷ್ಟ್ರಗಳು, ಮಾನವೀಯ ಆಧಾರದಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.