ಇಸ್ರೇಲ್‌ನ ದಾಳಿಯಲ್ಲಿ ಹತ್ಯೆಯಾದ ಇರಾನ್ ಸೇನೆಯ ಕಮಾಂಡರ್‌ಗಳು, ಅಣು ವಿಜ್ಞಾನಿಗಳ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
(ರಾಯಿಟರ್ಸ್ ಚಿತ್ರ)
ದುಬೈ: ಜೂನ್ 23ರಂದು ರಾಜಧಾನಿ ಟೆಹರಾನ್‌ನಲ್ಲಿರುವ ಎವಿನ್ ಜೈಲಿನ ಮೇಲೆ ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ 71 ಮಂದಿ ಮೃತಪಟ್ಟಿದ್ದರು ಎಂದು ಇರಾನ್‌ನ ನ್ಯಾಯಾಂಗ ಇಲಾಖೆಯ ವಕ್ತಾರ ಅಸ್ಗರ್ ಜಹಾಂಗೀರ್ ಇಂದು (ಭಾನುವಾರ) ಹೇಳಿದ್ದಾರೆ.
ಕದನ ವಿರಾಮ ಏರ್ಪಡುವುದಕ್ಕೂ ಮುನ್ನ ಮಿಲಿಟರಿ ಹಾಗೂ ಪರಮಾಣು ಘಟಕಗಳನ್ನು ಮೀರಿ ಇರಾನ್‌ನ ಆಡಳಿತ ವ್ಯವಸ್ಥೆಯನ್ನು ಗುರಿಯಾಗಿಸಿ ರಾಜಕೀಯ ಕೈದಿಗಳಿರುವ ಟೆಹರಾನ್‌ನ ಜೈಲಿನ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು ಎಂದು ಅವರು ಹೇಳಿದ್ದಾರೆ.
‘ಕಾರಾಗೃಹ ಸಿಬ್ಬಂದಿ, ಸೈನಿಕರು, ಕೈದಿಗಳು, ಕಾರಾಗೃಹಕ್ಕೆ ತಮ್ಮವರ ಭೇಟಿಗಾಗಿ ಬಂದಿದ್ದ ಕುಟುಂಬ ಸದಸ್ಯರು ದಾಳಿಯಲ್ಲಿ ಮೃತಪಟ್ಟಿದ್ದರು’ ಎಂದು ಮಿಜಾನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜಹಾಂಗೀರ್ ಹೇಳಿದ್ದಾರೆ.
ದಾಳಿಯಲ್ಲಿ ಎವಿನ್ ಜೈಲಿನ ಕಟ್ಟಡಕ್ಕೆ ಹಾನಿಯಾಗಿದ್ದು, ಉಳಿದ ಕೈದಿಗಳನ್ನು ಟೆಹರಾನ್‌ನ ಇತರೆ ಜೈಲುಗಳಿಗೆ ವರ್ಗಾಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.