ಟೆಹರಾನ್: ಮಧ್ಯಪ್ರಾಚ್ಯ ದೇಶಗಳಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಭಯ ದೇಶಗಳು ಸತತ ದಾಳಿ, ಪ್ರತಿದಾಳಿ ನಡೆಸುತ್ತಿವೆ.
ಇಸ್ರೆಲ್‌ನ ಗುಪ್ತಚರ ದಳ ಮೊಸಾದ್ ಇರಾನ್‌ನೊಳಗೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವ ಮೂಲಕ ಭಾರಿ ದಾಳಿ ಮಾಡಲು ಯೋಜನೆ ರೂಪಿಸಿದೆ ಎನ್ನುವ ಗುಪ್ತಚರ ವರದಿಗಳ ಆಧಾರದ ಮೇಲೆ ಅನುಮಾನಾಸ್ಪದ ಚಟುವಟಿಕೆಗಳು ಕಂಡರೆ ತಿಳಿಸುವಂತೆ ಇರಾನ್ ಸೇನೆಯು ತನ್ನ ಜನರಲ್ಲಿ ಮನವಿ ಮಾಡಿದೆ.
ದೇಶದ ಭದ್ರತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆ ಅಥವಾ ಟ್ರಕ್, ವ್ಯಾನ್ ಹಾಗೂ ಕಾರ್ಗೋ ವಾಹನಗಳ ಸಂಚಾರವು ಸಂದೇಹ ಬರುವಂತೆ ಕಂಡರೆ ತಕ್ಷಣವೇ ಗುಪ್ತಚರ ಸಚಿವಾಲಯದ ಪ್ರಧಾನ ಕಚೇರಿಗೆ ಅಥವಾ ಐಆರ್‌ಜಿಸಿ ಗುಪ್ತಚರ ಸಂಸ್ಥೆಗೆ ಮಾಹಿತಿ ನೀಡುವಂತೆ ಸೇನೆಯು ಕೋರಿಕೊಂಡಿದೆ.
ಮೊಸಾದ್ ಮೂಲಕ ಸ್ಪೋಟಕ ಸಾಗಿಸುವ ಡ್ರೋನ್‌ಗಳನ್ನು ಇರಾನ್‌ನೊಳಗೆ ಸಾಗಿಸಿ, ಅಲ್ಲಿಂದಲೇ ಅವರ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಇಸ್ರೇಲ್ ಯೋಜನೆ ರೂಪಿಸಿತ್ತು ಎಂದು ಗುಪ್ತಚರ ಮೂಲಗಳು ವರದಿ ಮಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.