
ಖಾನ್ ಯೂನಿಸ್: ಇಸ್ರೇಲ್ 15 ಪ್ಯಾಲೆಸ್ಟೀನಿಯನ್ನರ ಶವಗಳನ್ನು ಬುಧವಾರ ಹಸ್ತಾಂತರಿಸಿದೆ ಎಂದು ಗಾಜಾದ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದ ಕದನ ವಿರಾಮ ಒಪ್ಪಂದಂತೆ ಒತ್ತೆಯಾಳು ಮತ್ತು ಮೃತದೇಹಗಳ ಪರಸ್ಪರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಒಪ್ಪಂದದ ಪ್ರಕಾರ ಪ್ರತಿ ಒತ್ತೆಯಾಳಿಗೆ 15 ಪ್ಯಾಲೆಸ್ಟೀನಿಯನ್ನರ ಶವಗಳನ್ನು ಹಿಂದಿರುಗಿಸಲು ಇಸ್ರೇಲ್ ಒಪ್ಪಿಕೊಂಡಿತ್ತು.
ಇಸ್ರೇಲ್ ಒತ್ತೆಯಾಳು ಒಬ್ಬರನ್ನು ಗಾಜಾ ಹಸ್ತಾಂತರಿಸಿದ ಬಳಿಕ, ಪ್ಯಾಲೆಸ್ಟೀನಿಯನ್ನರ ಶವಗಳನ್ನು ಇಸ್ರೇಲ್ ಹಸ್ತಾಂತರಿಸಿದೆ. ಇಸ್ರೇಲ್ ಮತ್ತು ಥಾಯ್ಲೆಂಡ್‌ನ ಇಬ್ಬರು ಒತ್ತೆಯಾಳುಗಳು ಇನ್ನೂ ಗಾಜಾದಲ್ಲಿಯೇ ಉಳಿದಿದ್ದು, ಈ ಒಪ್ಪಂದವನ್ನು ಎತ್ತಿಹಿಡಿಯುವ ಸಲುವಾಗಿ ಅವರನ್ನೂ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಗಾಜಾ ಬುಧವಾರ ತಿಳಿಸಿದೆ.
ಕಳೆದ ತಿಂಗಳಿಂದ ಇಲ್ಲಿಯವರೆಗೆ ಇಸ್ರೇಲ್ 345 ಪ್ಯಾಲೆಸ್ಟೀನಿಯನ್ನರ ಶವಗಳನ್ನು ಗಾಜಾಕ್ಕೆ ಹಿಂದಿರುಗಿಸಿದೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.