ADVERTISEMENT

DelhiBlast: ಉಗ್ರರು ನಗರಗಳನ್ನು ನಾಶಪಡಿಸಬಹುದು,ಆತ್ಮಶಕ್ತಿಯನ್ನಲ್ಲ: ಇಸ್ರೇಲ್ PM

ಪಿಟಿಐ
Published 12 ನವೆಂಬರ್ 2025, 14:14 IST
Last Updated 12 ನವೆಂಬರ್ 2025, 14:14 IST
<div class="paragraphs"><p>ಇಸ್ರೇಲ್ ಪ್ರಧಾನಿ&nbsp;ಬೆಂಜಮಿನ್  ನೆತನ್ಯಾಹು ಮತ್ತು ನರೇಂದ್ರ ಮೋದಿ</p></div>

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ನರೇಂದ್ರ ಮೋದಿ

   

–ಪಿಟಿಐ ಚಿತ್ರ

ಜೆರುಸಲೆಂ: ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದಿರುವ ಕಾರು ಸ್ಫೋಟ ಘಟನೆಯನ್ನು ಖಂಡಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ನಮ್ಮ ನಗರಗಳ ಮೇಲೆ ಉಗ್ರರು ದಾಳಿ ಮಾಡಿ ನಾಶಗೊಳಿಸಬಹುದು ಆದರೆ, ಆತ್ಮಶಕ್ತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ADVERTISEMENT

ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆಯ ಬಳಿ ಚಲಿಸುತ್ತಿದ್ದ ಕಾರು ಸ್ಫೋಟಗೊಂಡು 12 ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ಈ ಘಟನೆಯನ್ನು ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನೆತನ್ಯಾಹು, ‘ಆತ್ಮೀಯ ಸ್ನೇಹಿತ ನರೇಂದ್ರ ಮೋದಿ ಮತ್ತು ಭಾರತದ ಧೈರ್ಯವಂತ ನಾಗರಿಕರೆ, ಸಾರಾ, ನಾನು ಮತ್ತು ಇಡೀ ಇಸ್ರೇಲ್‌ ಜನತೆ ಸ್ಫೋಟದಲ್ಲಿ ಮೃತರಾದ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ. ಈ ಸಮಯದಲ್ಲಿ ಭಾರತದೊಂದಿಗೆ ಇಸ್ರೇಲ್‌ ದೃಢವಾಗಿ ನಿಲ್ಲಲಿದೆ’ ಎಂದು ಬರೆದುಕೊಂಡಿದ್ದಾರೆ.

‘ಭಾರತ ಮತ್ತು ಇಸ್ರೇಲ್ ಶಾಶ್ವತ ಸತ್ಯಗಳ ಮೇಲೆ ನಿಂತಿರುವ ಪ್ರಾಚೀನ ನಾಗರಿಕತೆಯನ್ನು ಒಳಗೊಂಡಿದೆ. ಉಗ್ರರು ನಮ್ಮ ನಗರಗಳ ಮೇಲೆ ದಾಳಿ ನಡೆಸಬಹುದು ಆದರೆ ಆತ್ಮಶಕ್ತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರಗಳ ಬೆಳಕು ನಮ್ಮ ಶತ್ರುಗಳ ಕತ್ತಲೆಯನ್ನು ಮೀರಿಸುತ್ತದೆ’ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.