ಒತ್ತೆಯಾಳುಗಳನ್ನು ವಾಪಸು ಕರೆಸಿಕೊಳ್ಳಿ ಎಂದು ಆಗ್ರಹಿಸಿ ಇಸ್ರೇಲ್‌ನ ಒತ್ತೆಯಾಳುಗಳ ಕುಟುಂಬಸ್ಥರು ಮಂಗಳವಾರ ಹೆದ್ದಾರಿ ತಡೆ ನಡೆಸಿ, ಇಸ್ರೇಲ್ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು
ಎಎಫ್‌ಪಿ ಚಿತ್ರ
ಲಾಡ್: ‘ಒಂದು ವರ್ಷದ ಹಿಂದೆಯೇ ನಾವು ಯುದ್ಧವನ್ನು ನಿಲ್ಲಿಸಬಹುದಿತ್ತು. ಒತ್ತೆಯಾಳುಗಳನ್ನು ವಾಪಸು ಕರೆಸಿಕೊಳ್ಳಬಹುದಿತ್ತು. ಆದರೆ, ನಮ್ಮ ಪ್ರಧಾನಿಯು ಮತ್ತೆ ಮತ್ತೆ ಯುದ್ಧವನ್ನು ಇಚ್ಛಿಸಿದರು. ತನ್ನದೇ ನಾಗರಿಕರ ಜೀವದಾನವನ್ನು ಬಯಸಿದರು. ತಮ್ಮ ಅಧಿಕಾರಕ್ಕಾಗಿ ಉಳಿಸಿಕೊಳ್ಳಲು ಇಷ್ಟೆಲ್ಲ ಮಾಡಿದರು...’
–ಹಮಾಸ್ ಬಂಡುಕೋರರ ಬಳಿ ಒತ್ತೆಯಾಳುಯಾಗಿರುವ 25 ವರ್ಷ ಮತನ್ ಎಂಬ ಯುವಕನ ತಂದೆಯ ಮಾತುಗಳಿವು. ಒತ್ತೆಯಾಳುಗಳನ್ನು ವಾಪಸು ಕರೆಸಿಕೊಳ್ಳಲು ಆಗ್ರಹಿಸಿ ಇಸ್ರೇಲ್‌ನಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಇಸ್ರೇಲ್‌ನ ಒತ್ತೆಯಾಳುಗಳು ಮತ್ತು ಕಾಣೆಯಾದವರ ಕುಟುಂಬಗಳ ವೇದಿಕೆ ವತಿಯಿಂದ ಮಂಗಳವಾರವನ್ನು ‘ಸಂಘರ್ಷದ ರಾಷ್ಟ್ರೀಯ ದಿನ’ವನ್ನಾಗಿ ಆಚರಿಸಿ, ತೀವ್ರ ಪ್ರತಿಭಟನೆ ನಡೆಸಲಾಯಿತು.
ಟೈರ್ ಸುಟ್ಟು, ಹೆದ್ದಾರಿಗಳ ತಡೆ ನಡೆಸಿ ಪ್ರತಿಭಟನಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ‘ತಕ್ಷಣವೇ ಕದನವಿರಾಮ ಘೋಷಿಸಿ’ ಎಂದು ಆಗ್ರಹಿಸಿದರು. ಆದರೆ, ಇನ್ನೊಂದೆಡೆ ಗಾಜಾದ ಮೇಲೆ ತನ್ನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಲು ಸರ್ಕಾರ ನಿರ್ಧರಿಸಿದೆ. ‘ಯುದ್ಧದಿಂದಷ್ಟೇ ಹಮಾಸ್ ಅನ್ನು ತೊಡೆದು ಹಾಕಬಹುದು’ ಎಂದು ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದರು.
ಗಾಜಾದ ನಾಸಿರ್ ಆಸ್ಪತ್ರೆ ಮೇಲಿನ ದಾಳಿ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ದಾಳಿಯಲ್ಲಿ ಪತ್ರಕರ್ತರೂ ಸೇರಿ 20 ಜನರು ಮೃತಪಪಟ್ಟಿದ್ದರು. ಈ ದಾಳಿಯ ಮಾರನೇ ದಿನವೇ ಇಸ್ರೇಲ್‌ನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.