ADVERTISEMENT

ಇಸ್ರೇಲ್: ಉಗ್ರರಿಂದ ರಾಕೆಟ್‌ ದಾಳಿ

ಏಜೆನ್ಸೀಸ್
Published 17 ಏಪ್ರಿಲ್ 2021, 8:36 IST
Last Updated 17 ಏಪ್ರಿಲ್ 2021, 8:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗಾಜಾ ಸಿಟಿ:‘ದಕ್ಷಿಣ ಇಸ್ರೇಲ್‌ನ ಕೆಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪ್ಯಾಲೆಸ್ಟಿನ್‌ ಉಗ್ರರು ಶುಕ್ರವಾರ ಗಾಜಾ ಪಟ್ಟಿಯಿಂದ ರಾಕೆಟ್‌ ದಾಳಿ ನಡೆಸಿದ್ದಾರೆ. ಇದು ಕಳೆದ 24 ಗಂಟೆಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ’ ಎಂದು ಇಸ್ರೇಲ್‌ ಸೇನೆಯು ಹೇಳಿದೆ.

‘ಈ ದಾಳಿಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ’ ಎಂದು ಸೇನೆ ತಿಳಿಸಿದೆ.

‘ಈ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳು, ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ಐದು ಸ್ಥಳಗಳಲ್ಲಿ ದಾಳಿ ನಡೆಸಿವೆ. ಹಮಾಸ್‌ ಉಗ್ರ ಸಂಘಟನೆಗೆ ಸೇರಿದ ಶಸ್ತ್ರಾಸ್ತ್ರ ತಯಾರಿಕಾ ಘಟಕ, ತರಬೇತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್‌ ಸೇನಾಪಡೆಯು ಮಾಹಿತಿ ನೀಡಿದೆ.

ADVERTISEMENT

ಹಮಾಸ್‌ ಉಗ್ರ ಸಂಘಟನೆಯು ಗಾಜಾ ಪಟ್ಟಿಯನ್ನು ನಿಯಂತ್ರಿಸುತ್ತದೆ.

‘ಪ್ಯಾಲೆಸ್ಟೈನ್‌ನಿಂದ ನಡೆಸಲಾಗುವ ಎಲ್ಲಾ ದಾಳಿಗಳಿಗೂ ಇಸ್ರೇಲ್‌, ಹಮಾಸ್‌ ಅನ್ನು ದೂಷಿಸುತ್ತದೆ’ ಎಂದು ಹಮಾಸ್‌ ಸಂಘಟನೆ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.