

ಜೆರುಸಲೇಂ: ವೆಸ್ಟ್ ಬ್ಯಾಂಕ್‌ನ ಉತ್ತರ ಭಾಗದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಪ್ಯಾಲೆಸ್ಟೀನಿಯನ್ ಉಗ್ರರನ್ನು ಮಂಗಳವಾರ ಮುಂಜಾನೆ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.
ಬಂಡುಕೋರರ ಭದ್ರಕೋಟೆ ಎಂದೇ ಬಿಂಬಿತವಾಗಿರುವ ವೆಸ್ಟ್ ಬ್ಯಾಂಕ್‌ನ ಉತ್ತರದ ಜೆನಿನ್ ಪಟ್ಟಣದ ಸನಿಹದ ಗುಹೆಯೊಂದರಿಂದ ಉಗ್ರರು ಹೊರಬರುತ್ತಿದ್ದಂತೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರು ದಾಳಿ ನಡೆಸಲು ಯೋಜಿಸಿದ್ದರು ಎಂದಿರುವ ಇಸ್ರೇಲ್, ಹೆಚ್ಚಿನ ಮಾಹಿತಿ ನೀಡಿಲ್ಲ.
ಬಂಡುಕೋರರು ಅಡಗಿದ್ದ ಗುಹೆಯ ನಾಶಕ್ಕಾಗಿ ಇಸ್ರೇಲ್ ಸೇನೆಯು ವೈಮಾನಿಕ ದಾಳಿಯನ್ನು ನಡೆಸಿದೆ ಎಂದು ಪ್ರಕಟಣೆ ತಿಳಿಸಿದೆ. ದಾಳಿಯನ್ನು ಸೇನೆ ಖಚಿತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.