ADVERTISEMENT

ಗಾಜಾ ಮೇಲೆ ಇಸ್ರೇಲ್‌ ದಾಳಿ: 28 ಮಂದಿ ಸಾವು

ಏಜೆನ್ಸೀಸ್
Published 24 ಏಪ್ರಿಲ್ 2025, 14:40 IST
Last Updated 24 ಏಪ್ರಿಲ್ 2025, 14:40 IST
<div class="paragraphs"><p>ಗಾಜಾದ ಮೇಲೆ ಇಸ್ರೇಲ್‌ ದಾಳಿ</p></div>

ಗಾಜಾದ ಮೇಲೆ ಇಸ್ರೇಲ್‌ ದಾಳಿ

   

ರಾಯಿಟರ್ಸ್‌

ದೀರ್‌ ಅಲ್‌ ಬಲಾಹ್: ಗಾಜಾ ಪಟ್ಟಿಯ ವಿವಿಧೆಡೆ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ 28 ಮಂದಿ ಮೃತಪಟ್ಟಿದ್ದಾರೆಂದು ಗಾಜಾದ ಆರೋಗ್ಯಾಧಿಕಾರಿಗಳು ಗುರುವಾರ ಹೇಳಿದ್ದಾರೆ. 

ADVERTISEMENT

ಉತ್ತರ ಗಾಜಾದ ಜಬಾಲಿಯಾದಲ್ಲಿನ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದರೆ, ಖಾನ್‌ ಯೂನಿಸ್‌ ನಗರದ ಮೇಲಿನ ದಾಳಿಯಲ್ಲಿ ತಾಯಿ, ನಾಲ್ಕು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ಕೇಂದ್ರ ಗಾಜಾದಲ್ಲಿ ಆರು ಮಂದಿ ಮೃತಪಟ್ಟಿದ್ದರೆ, ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ನಾಲ್ಕು ಮಕ್ಕಳು ಮತ್ತು ಅವರ ಪೋಷಕರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

 ಇತ್ತ ಹಮಾಸ್‌ ಉಗ್ರರ ಕಮಾಂಡ್‌ ಸೆಂಟರ್‌ಗಳ ಮೇಲಷ್ಟೇ ತಾನು ದಾಳಿ ನಡೆಸಿದ್ದಾಗಿ ಇಸ್ರೇಲ್‌ ಹೇಳಿಕೊಂಡಿದೆ. ಏತನ್ಮಧ್ಯೆ, ಅಮೆರಿಕದ ಯಾಲೆ ವಿಶ್ವವಿದ್ಯಾಲಯದಲ್ಲಿ ಸಂವಾದಕ್ಕೆಂದು ತೆರಳಿದ್ದ ಇಸ್ರೇಲ್‌ ರಕ್ಷಣಾ ಸಚಿವರ ಮೇಲೆ ನೀರಿನ ಬಾಟಲಿಗಳನ್ನು ಎಸೆದು ಪ್ಯಾಲೆಸ್ಟೀನ್‌ ಪರ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.