

ಸಾಂಕೇತಿಕ ಚಿತ್ರ
ಜೆರುಸಲೇಂ: ವೆಸ್ಟ್‌ಬ್ಯಾಂಕ್‌ನ ಎರಡು ಪ್ರದೇಶಗಳಲ್ಲಿ ದಾಳಿ ನಡೆಸಿ, ಮೂವರು ಇಸ್ರೇಲಿಗರು ಗಾಯಗೊಳ್ಳಲು ಕಾರಣವಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ಶಂಕಿಸಲಾದ ಇಬ್ಬರು ಪ್ಯಾಲೆಸ್ಟೀನ್‌ನ ದಾಳಿಕೋರರನ್ನು ಇಸ್ರೇಲ್ ಪಡೆಗಳು ಮಂಗಳವಾರ ಹತ್ಯೆಗೈದಿವೆ.
ಕೇಂದ್ರ ವೆಸ್ಟ್ ಬ್ಯಾಂಕ್‌ನ ರಮಲ್ಲಾದಲ್ಲಿ ಅಟ್ರೇಟ್ ಎಂಬ ನಗರದ ಬಳಿ ಇಸ್ರೇಲ್‌ನ ಇಬ್ಬರು ಭದ್ರತಾ ಸಿಬ್ಬಂದಿಗೆ ಚೂರಿ ಇರಿದು ಪರಾರಿಯಾಗುತ್ತಿದ್ದ ಆರೋಪದಲ್ಲಿ ಒಬ್ಬ ಪ್ಯಾಲೆಸ್ಟೀನಿ ಶಂಕಿತ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.
ಮತ್ತೊಂದೆಡೆ, ದಕ್ಷಿಣ ವೆಸ್ಟ್‌ಬ್ಯಾಂಕ್ ಪ್ರದೇಶದಲ್ಲಿ ಮಹಿಳಾ ಯೋಧರೊಬ್ಬರ ಮೇಲೆ ಕಾರು ಹರಿಸಿ ಕೊಲ್ಲಲು ಯತ್ನಿಸಿದ್ದ ಆರೋಪದಲ್ಲಿ ಮತ್ತೊಬ್ಬ ಶಂಕಿತ ದಾಳಿಕೋರನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ಇಸ್ರೇಲ್ ಪಡೆಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.