ADVERTISEMENT

ಇಸ್ರೊ ಜೊತೆ ಕೈಜೋಡಿಸಲು ಮಾರಿಷಸ್ ಬಯಕೆ

ಏಜೆನ್ಸೀಸ್
Published 7 ಸೆಪ್ಟೆಂಬರ್ 2019, 13:42 IST
Last Updated 7 ಸೆಪ್ಟೆಂಬರ್ 2019, 13:42 IST
   

ಮಾರಿಷಸ್: ಇಸ್ರೊದ ಚಂದ್ರಯಾನ-2 ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗಳು ವ್ಯಕ್ತವಾಗಿದ್ದು, ಭಾರತ ಮುಂದಿನ ದಿನಗಳಲ್ಲಿ ಇಂತಹಪ್ರಯತ್ನ ಮುಂದುವರಿಸುವುದಾದರೆ ಜಂಟಿ ಸಹಬಾಗಿತ್ವದಲ್ಲಿ ಪಾಲ್ಗೊಳ್ಳಲು ಸಿದ್ಧವಿರುವುದಾಗಿ ಮಾರಿಷಸ್ ಹೇಳಿಕೆ ನೀಡಿದೆ.

ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ಚಂದ್ರಯಾನ-2 ಪ್ರಯತ್ನದ ಕುರಿತು ಹೇಳಿಕೆ ನೀಡಿದ್ದು, ಈ ಬಾರಿ ಚಂದ್ರನ ಮೇಲೆ ಲ್ಯಾಂಡ್ ಆಗಲು ಯಶಸ್ವಿಯಾಗಲಿಲ್ಲ. ಆದರೆ, ಈ ವಿಶೇಷ ಕಾರ್ಯಕ್ರಮದ ಮೂಲಕ ಭಾರತ ತಾಂತ್ರಿಕತೆಯಲ್ಲಿ ಮುಂದಿದೆ ಎಂಬುದನ್ನು ವಿಶ್ವಕ್ಕೆ ತಿಳಿಯುವಂತೆ ಮಾಡಿದೆ ಎಂದು ಪ್ರಶಂಸಿದ್ದಾರೆ.ಅಲ್ಲದೆ, ಇಸ್ರೊಜೊತೆ ಭವಿಷ್ಯದಲ್ಲಿ ಕೈಜೋಡಿಸಲು ಸಿದ್ಧವಿದೆ.ವಿಕ್ರಂ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಯತ್ನಕ್ಕಾಗಿಭಾರತ ಸರ್ಕಾರ ಹಾಗೂ ಇಸ್ರೊವಿಜ್ಞಾನಿಗಳ ತಂಡವನ್ನುಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ (07-09-2019) ನಸುಕಿನಲ್ಲಿ ಚಂದ್ರಯಾನ-2 ವ್ಯೋಮ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಅದರಿಂದ ಸಂದೇಶ ಬರಲಿಲ್ಲ. ಲಕ್ಷಾಂತರ ಮೈಲುಗಳನ್ನು ಕ್ರಮಿಸಿದರೂ ನೌಕೆಗೂಭಾರತದ ಭಾಹ್ಯಾಕಾಶ ಕೇಂದ್ರಕ್ಕೂ ಇದ್ದ ಸಂಪರ್ಕ ಕೇವಲ 2.1 ಕಿಲೋಮೀಟರ್ ಅಂತರದಲ್ಲಿ ಕಡಿತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.