ADVERTISEMENT

ಚೀನಾ ಹಿಂದಿಕ್ಕಿದ ಇಟಲಿ: ಕೋವಿಡ್-19ಗೆ ಬಲಿಯಾದವರ ಸಂಖ್ಯೆ 5,476ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 13:25 IST
Last Updated 23 ಮಾರ್ಚ್ 2020, 13:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರೋಮ್‌: ಕೊರೊನಾ ವೈರಸ್‌ಗೆ ತತ್ತರಿಸಿರುವ ಇಟಲಿಯಲ್ಲಿ ಬಲಿಯಾದವರ ಸಂಖ್ಯೆ 5,500ರ ಗಡಿ ಸಮೀಪಿಸಿದ್ದು, ಮೃತರ ಸಂಖ್ಯೆಯು ಶನಿವಾರಕ್ಕೆ ಹೋಲಿಸಿದರೆ ಶೇ 13.5ರಷ್ಟು ಏರಿಕೆಯಾಗಿದೆ.

ಇಟಲಿಯಲ್ಲಿ ಭಾನುವಾರ ಒಂದೇ ದಿನ 651 ಮಂದಿ ಮೃತಪಟ್ಟಿದ್ದು, ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆಯು 5,476 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

53,578 ಸಾವಿರದಷ್ಟು ಮಂದಿಯಿದ್ದ ಸೋಂಕಿತರ ಸಂಖ್ಯೆ ಶೇ 10.4ಕ್ಕೆ ಏರಿಕೆಯಾಗುವ ಮೂಲಕ ಇದೀಗ 59,138ಕ್ಕೆ ತಲುಪಿದೆ. ಇದುವರೆಗೂ 7,024 ಮಂದಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, 3,009 ಮಂದಿಯನ್ನು ತೀವ್ರ ನಿಗಾದಲ್ಲಿಡಲಾಗಿದೆ.

ADVERTISEMENT

ಕಳೆದ ಶುಕ್ರವಾರ ಒಂದೇ ದಿನ ಇಟಲಿಯಲ್ಲಿ 627 ಮಂದಿ ಮೃತಪಟ್ಟಿದ್ದರೆ, ಬುಧವಾರವೂ ಒಂದೇ ದಿನ 475 ಮಂದಿ ಬಲಿಯಾಗಿದ್ದರು. ಈ ಮೂಲಕ ಕೊರೊನಾ ವೈರಸ್ ಭೀಕರತೆ ಮೆರೆದಿತ್ತು.

ಚೀನಾದಲ್ಲಿ ಈವರೆಗೆ 3,249 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿರುವ 187 ದೇಶಗಳ ಪೈಕಿ ಇದುವರೆಗೂ ವಿಶ್ವದಾದ್ಯಂತ 294,110 ಜನರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದ್ದು, 12,944 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.