ADVERTISEMENT

ಏಳು ತಿಂಗಳ ಬಳಿಕ ಇಟಲಿಯಲ್ಲಿ ಶಾಲೆಗಳು ಪುನರಾರಂಭ

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 11:16 IST
Last Updated 14 ಸೆಪ್ಟೆಂಬರ್ 2020, 11:16 IST
ಇಟಲಿಯಲ್ಲಿ ಏಳು ತಿಂಗಳ ಲಾಕ್‌ಡೌನ್ ಬಳಿ ಶಾಲೆಗಳು ಪುನರಾರಂಭಗೊಂಡಿದ್ದು ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗೆ ಬಂದ ವಿದ್ಯಾರ್ಥಿಯನ್ನು ಸ್ವಾಗತಿಸುತ್ತಿರುವ ಶಿಕ್ಷಕಿ.
ಇಟಲಿಯಲ್ಲಿ ಏಳು ತಿಂಗಳ ಲಾಕ್‌ಡೌನ್ ಬಳಿ ಶಾಲೆಗಳು ಪುನರಾರಂಭಗೊಂಡಿದ್ದು ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗೆ ಬಂದ ವಿದ್ಯಾರ್ಥಿಯನ್ನು ಸ್ವಾಗತಿಸುತ್ತಿರುವ ಶಿಕ್ಷಕಿ.   

ಕೊಡೊಗ್ನೊ(ಇಟಲಿ): ಕೋವಿಡ್‌ 19 ಸಾಂಕ್ರಾಮಿಕ ರೋಗದಿಂದಾಗಿ ಏಳು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಇಟಲಿಯ ಶಾಲೆಗಳೆಲ್ಲ ಸೋಮವಾರದಿಂದ ಪುನರಾರಂಭಗೊಂಡಿವೆ.

ವಿಶ್ವದ ಕೊರೊನಾ ವೈರಸ್‌ ಸೋಂಕಿನ ಹಾಟ್‌ ಸ್ಪಾಟ್‌ ಎಂದೇ ಬಿಂಬಿತವಾಗಿದ್ದ ಇಟಲಿಯಲ್ಲಿ ಫೆಬ್ರುವರಿ 21ರಂದು ಶಾಲೆಗಳು ಬಂದ್‌ ಆಗಿದ್ದವು. ಉತ್ತರ ಇಟಲಿಯ ನಗರವಾದ ಕೊಡೊಗ್ನೊದ ಶಾಲೆಯೊಂದರಲ್ಲಿ ಏಳು ತಿಂಗಳ ನಂತರ ಮೊದಲ ಬಾರಿಗೆ ಗಂಟೆ ಬಾರಿಸಿತು.

ಕೊರೊನಾ ಸೋಂಕು ಹೆಚ್ಚಾಗಿ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಆತಂಕಗೊಂಡ ಪೋಷಕರು ಶಾಲೆಗೆ ಧಾವಿಸಿ, ಮಕ್ಕಳನ್ನು ಮನೆಗೆ ಕರೆದೊಯ್ದಿದ್ದರು. ಅದಾದ ನಂತರ ಇಟಲಿಯ 8 ಕೋಟಿ ಮಕ್ಕಳು ಎರಡೂವರೆ ತಿಂಗಳ ಕಟ್ಟು ನಿಟ್ಟಿನ ಲಾಕ್‌ಡೌನ್ ನಿಯಮದಿಂದ ಬಳಲುವಂತಾಯಿತು. ಕೆಲವರು ಅನಾರೋಗ್ಯದಿಂದ ಬಳಲಿದರು. ‘ಅನೇಕ ಮಕ್ಕಳು ಕೊರೊನಾ ಸೋಂಕಿನಿಂದಾಗಿ ತಮ್ಮ ಅಜ್ಜ ಅಜ್ಜಿಯರನ್ನು ಕಳೆದುಕೊಳ್ಳುವಂತಾಯಿತು‘ ಎಂದು ಕೊಡೊಗ್ನೊ ನರ್ಸರಿ ಶಾಲೆಯ ಪ್ರಾಚಾರ್ಯೆ ಸೆಸಿಲಿಯಾ ಕುಗಿನಿ ಹೇಳಿದರು.

ADVERTISEMENT

ಇಟಲಿಯಲ್ಲಿ ಶಾಲೆಗಳು ಪುನರಾರಂಭವಾಗುವ ಮೂಲಕ, ಲಾಕ್‌ಡೌನ್‌ಗೆ ಮೊದಲಿದ್ದ ದಿನಚರಿಗೆ ಮರಳುವತ್ತ ಪ್ರಮುಖ ಹೆಜ್ಜೆ ಇಟ್ಟಂತಾಗಿದೆ. ಆದರೆ, ಈ ಪ್ರಕ್ರಿಯೆ ಲೊಂಬಾರ್ಡಿ ಮತ್ತು ವೆನಟೊದ 11 ಪಟ್ಟಣಗಳಲ್ಲಿ ಕೇವಲ ಸಾಂಕೇತಿಕವಾಗಿದೆ. ಏಕೆಂದರೆ, ಇವೆಲ್ಲ ಕೊರೊನಾ ವೈರಸ್‌ ಸೋಂಕಿನ ಕೆಂಪು ವಲಯಗಳನ್ನಾಗಿ ಗುರುತಿಸಲಾಗಿದೆ.

ಕೊಡೊಗ್ನೊ ಮೇಯರ್ ಫ್ರಾನ್ಸ್‌ಸ್ಕೊ ಪ್ಯಾಸೆರಿನಿ ಅವರ ಪ್ರಕಾರ, ‘ಕಳೆದ ತಿಂಗಳಿನಿಂದ 17 ಸಾವಿರ ಜನಸಂಖ್ಯೆಯುಳ್ಳ ಈ ಪಟ್ಟಣದದಲ್ಲಿ ಯಾವುದೇ ಹೊಸ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ. ಆದರೂ ಅಧಿಕಾರಿಗಳಿಗೆ ಇದು ತೃಪ್ತಿತಂದಂತೆ ಕಾಣುತ್ತಿಲ್ಲ.ಈ ಅಧಿಕಾರಿಗಳು, ನಗರದ 3500 ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ರಕ್ಷಣೆ ನೀಡಲು ಶಾಲಾ ಆಡಳಿತ ಅಧಿಕಾರಿಗಳೊಂದಿಗೆ ಸೇರಿ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.