ADVERTISEMENT

ಇಟಲಿಯಲ್ಲಿ ಮೊದಲ 'ಮಂಕಿಪಾಕ್ಸ್' ಪ್ರಕರಣ ಪತ್ತೆ

ಏಜೆನ್ಸೀಸ್
Published 19 ಮೇ 2022, 14:14 IST
Last Updated 19 ಮೇ 2022, 14:14 IST
ಕಾರ್ಲ್ ಟಿ ಬರ್ಕ್‌ಸ್ಟೋರ್ಮ್ ಟ್ವಿಟರ್ ಖಾತೆಯ ಚಿತ್ರ
ಕಾರ್ಲ್ ಟಿ ಬರ್ಕ್‌ಸ್ಟೋರ್ಮ್ ಟ್ವಿಟರ್ ಖಾತೆಯ ಚಿತ್ರ   

ರೋಮ್‌: ಇಟಲಿಯಲ್ಲಿಮೊದಲ 'ಮಂಕಿಪಾಕ್ಸ್‌' ಪ್ರಕರಣ ಗುರುವಾರ ಪತ್ತೆಯಾಗಿದೆ.

ಇತ್ತೀಚೆಗೆ ಕೆನರಿ ಐಸ್‌ಲ್ಯಾಂಡ್‌ನಿಂದ ವಾಪಸ್ ಆದ ಯುವಕನಲ್ಲಿ 'ಮಂಕಿಪಾಕ್ಸ್‌' ದೃಢಪಟ್ಟಿದೆ ಎಂದು ರೋಮ್‌ನ 'ಪಲ್ಲಾಂಝನಿ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಪೆಕ್ಷಿಯಸ್‌ ಡಿಸೀಸ್‌' ತಿಳಿಸಿದೆ.

ಸೋಂಕಿತ ಯುವಕನನ್ನು ಸದ್ಯ ಪ್ರತ್ಯೇಕವಾಸದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಇದಲ್ಲದೆ ಇನ್ನೂ ಎರಡು ಶಂಕಿತ ಪ್ರಕರಣಗಳ ತಪಾಸಣೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

ADVERTISEMENT

ಅಪರೂಪದ 'ಮಂಕಿಪಾಕ್ಸ್‌' ವೈರಸ್‌ನ ಈ ವರ್ಷದ ಮೊದಲ ಪ್ರಕರಣ ಅಮೆರಿಕದ ಮಸಾಚುಸೆಟ್ಸ್‌ನಲ್ಲಿ ಪತ್ತೆಯಾಗಿತ್ತು.

ಸಾಮಾನ್ಯವಾಗಿ ಆಫ್ರಿಕಾ ದೇಶಗಳಲ್ಲಿ ಮಾತ್ರವೇ ಪತ್ತೆಯಾಗುತ್ತಿದ್ದ ಈ ಸೋಂಕು ಪ್ರಕರಣಗಳು ಯೂರೋಪ್‌ನಲ್ಲಿಯೂ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.