ADVERTISEMENT

ನನ್ನ ಪದಚ್ಯುತಿ ಕಾರಣಕ್ಕಾಗಿ ಅಮೆರಿಕಾವನ್ನು ದೂಷಿಸುವುದಿಲ್ಲ: ಇಮ್ರಾನ್‌ ಖಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 13:00 IST
Last Updated 14 ನವೆಂಬರ್ 2022, 13:00 IST
ಇಮ್ರಾನ್‌ ಖಾನ್
ಇಮ್ರಾನ್‌ ಖಾನ್   

ಇಸ್ಲಾಮಾಬಾದ್‌/ಲಂಡನ್‌ (ಪಿಟಿಐ): ಅವಿಶ್ವಾಸ ನಿಲುವಳಿ ಮಂಡನೆಯಲ್ಲಿ ವಿಪಕ್ಷಗಳನ್ನು ಬೆಂಬಲಿಸಿ ಅಮೆರಿಕ ತನ್ನ ಪದಚ್ಯುತಿಗೆ ಕಾರಣವಾಗಿತ್ತು ಎಂಬ ಹೇಳಿಕೆಯಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಹಿಂದೆ ಸರಿದಿದ್ದಾರೆ.

ಇನ್ನು ಮುಂದೆ ಈ ಪದಚ್ಯುತಿ ಕಾರಣಕ್ಕಾಗಿ ಅಮೆರಿಕಾವನ್ನು ದೂಷಿಸುವುದಿಲ್ಲ. ಅದರೊಂದಿಗೆ ಸಂಬಂಧ ವೃದ್ಧಿಸಿಕೊಳ್ಳಲು ಬಯಸುವುದಾಗಿ ಇಮ್ರಾನ್‌ ಖಾನ್ (70) ಫೈನಾಶಿಯಲ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಎಲ್ಲರೊಂದಿಗೂ ಉತ್ತಮ ಸ್ನೇಹ ಸಂಬಂಧ ಹೊಂದಲು ಬಯಸುತ್ತದೆ. ಅದರಲ್ಲೂ ವಿಶೇಷವಾಗಿ ಅಮೆರಿಕಾದೊಂದಿಗೆ ಯಾವಾಗಲೂ ಉತ್ತಮ ಸ್ನೇಹ ಸಂಬಂಧವನ್ನು ಬಯಸುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.