ADVERTISEMENT

ಜೈಶಂಕರ್‌–ಬ್ಲಿಂಕೆನ್‌ ಮಾತುಕತೆ

ಪಿಟಿಐ
Published 2 ಅಕ್ಟೋಬರ್ 2024, 13:29 IST
Last Updated 2 ಅಕ್ಟೋಬರ್ 2024, 13:29 IST
 ಎಸ್‌.ಜೈಶಂಕರ್ ಮತ್ತು ಆ್ಯಂಟನಿ ಬ್ಲಿಂಕೆನ್
 ಎಸ್‌.ಜೈಶಂಕರ್ ಮತ್ತು ಆ್ಯಂಟನಿ ಬ್ಲಿಂಕೆನ್   

ವಾಷಿಂಗ್ಟನ್‌: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ವೃದ್ಧಿ, ಪಶ್ಚಿಮ ಏಷ್ಯಾ, ಇಂಡೊ–ಪೆಸಿಫಿಕ್‌ ಮತ್ತು ಉಕ್ರೇನ್‌ ಸ್ಥಿತಿಗತಿ ಕುರಿತು ಚರ್ಚಿಸಿದರು.

ಮೋದಿ 3.0 ಸರ್ಕಾರ ರಚನೆ ನಂತರ ಮೊದಲ ಬಾರಿಗೆ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದ ಜೈಶಂಕರ್‌ ಅವರು ಮಂಗಳವಾರ ಅಮೆರಿಕ ವಿದೇಶಾಂಗ ಇಲಾಖೆಯ ಮುಖ್ಯ ಕಚೇರಿಯಲ್ಲಿ ಬ್ಲಿಂಕೆನ್‌ ಅವರನ್ನು ಭೇಟಿ ಮಾಡಿದರು.

‘ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ಪರಿಹಾರಕ್ಕಾಗಿ ಭಾರತ ಮತ್ತು ಅಮೆರಿಕ ಒಟ್ಟಿಗೆ ಕೆಲಸ ಮಾಡುತ್ತಿವೆ. ಹವಾಮಾನ ಬಿಕ್ಕಟ್ಟು, ಪ್ರಾದೇಶಿಕ ಭದ್ರತೆ ಮತ್ತು ಸಮೃದ್ಧಿ ಹೆಚ್ಚಿಸುವ ಮಾರ್ಗಗಳ ಕುರಿತು ಜೈಶಂಕರ್ ಅವರೊಂದಿಗೆ ಚರ್ಚಿಸಿದೆ’ ಎಂದು ಬ್ಲಿಂಕೆನ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.