ADVERTISEMENT

ರಷ್ಯಾ ಮೇಲೆ ನಿರ್ಬಂಧದ ಬಗ್ಗೆ ಚರ್ಚೆ ನಡೆಸುತ್ತೇವೆ: ಜಪಾನ್ ಪ್ರಧಾನಿ ಕಿಶಿಡ

ಪಿಟಿಐ
Published 22 ಫೆಬ್ರುವರಿ 2022, 9:44 IST
Last Updated 22 ಫೆಬ್ರುವರಿ 2022, 9:44 IST
ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡ
ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡ   

ಟೋಕಿಯೊ: ಉಕ್ರೇನ್ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅತಿಕ್ರಿಮಿಸಿರುವ ರಷ್ಯಾವನ್ನು ಜಪಾನ್‌ನ ಪ್ರಧಾನಿ ಫ್ಯೂಮಿಯೊ ಕಿಶಿಡ ಟೀಕಿಸಿದ್ದಾರೆ. ನಮ್ಮ ದೇಶವು ರಷ್ಯಾ ಮೇಲೆ ಅಂತರರಾಷ್ಟ್ರೀಯ ನಿರ್ಬಂಧಗಳು ಸೇರಿದಂತೆ ‘ತೀವ್ರ ಕ್ರಮಗಳ’ಬಗ್ಗೆ ಚರ್ಚಿಸಲಿದೆ ಎಂದು ಹೇಳಿದ್ದಾರೆ.

ರಷ್ಯಾ ಬಂಡುಕೋರರ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಲು ಮುಂದಾಗಿರುವ ರಷ್ಯಾ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ತಮ್ಮ ಸೇನಾಪಡೆಗಳಿಗೆ ಆದೇಶಿಸಿದರು.

ಸೋಮವಾರದ ಪುಟಿನ್ ಅವರ ಘೋಷಣೆಯು ಉಕ್ರೇನ್ ಮೇಲೆ ಸಂಭವನೀಯ ಆಕ್ರಮಣದ ಆತಂಕವನ್ನು ಹೆಚ್ಚಿಸಿದೆ.

ADVERTISEMENT

‘ರಷ್ಯಾದ ಕ್ರಮಗಳು ಸ್ವೀಕಾರಾರ್ಹವಲ್ಲ ಮತ್ತು ನಾವು ನಮ್ಮ ಬಲವಾದ ಖಂಡನೆಯನ್ನು ವ್ಯಕ್ತಪಡಿಸುತ್ತೇವೆ’ಎಂದು ಕಿಶಿಡ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ‘ಜಪಾನ್, ತೀವ್ರ ಕಾಳಜಿಯಿಂದ ಬೆಳವಣಿಗೆಯನ್ನು ಎದುರು ನೋಡುತ್ತಿದೆ’ಅವರು ಹೇಳಿದ್ದಾರೆ.

ಈ ಮಧ್ಯೆ, ರಷ್ಯಾ ವಿರುದ್ಧ ಜಪಾನ್ ತನ್ನದೇ ಆದ ನಿರ್ಬಂಧಗಳನ್ನು ವಿಧಿಸಲು ಯೋಜಿಸುತ್ತಿದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಲು ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.