ADVERTISEMENT

ಅಮೆರಿಕ ಅಧ್ಯಕ್ಷ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವೆ: ಜಪಾನ್ ಸಚಿವ

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 2:41 IST
Last Updated 12 ಜನವರಿ 2025, 2:41 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌&nbsp;</p></div>

ಡೊನಾಲ್ಡ್‌ ಟ್ರಂಪ್‌ 

   

ರಾಯಿಟರ್ಸ್ ಚಿತ್ರ

ಟೊಕಿಯೊ: ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಜಪಾನ್‌ ವಿದೇಶಾಂಗ ಸಚಿವ ತಕೆಶಿ ಇವಾಯ ಭಾನುವಾರ ಹೇಳಿದ್ದಾರೆ.

ADVERTISEMENT

ಟ್ರಂಪ್‌ ಅವರ ಪದಗ್ರಹಣ ಸಮಾರಂಭ ಜನವರಿ 20ರಂದು ನಡೆಯಲಿದೆ.

ಸುದ್ದಿ ಸಂಸ್ಥೆ 'ಎನ್ಎಚ್‌ಕೆ' ಜೊತೆ ಮಾತನಾಡಿರುವ ಇವಾಯ, 'ಟ್ರಂಪ್ ಆಡಳಿತದೊಂದಿಗೆ ವಿಶ್ವಾಸಯುತ ಸಂಬಂಧವನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿದ್ದೇವೆ. ಅಮೆರಿಕದ ಸಂಭಾವ್ಯ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರೊಂದಿಗೆ ಸಭೆಗಳನ್ನು ಮುಂದುವರಿಸಲು ಬಯಸುತ್ತೇನೆ' ಎಂದಿದ್ದಾರೆ.

ಈ ಬಾರಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಇತರ ಕೆಲವು ದೇಶಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ. ಆದರೆ, ಇದುವರೆಗೆ ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇತರ ದೇಶಗಳ ನಾಯಕರು ಭಾಗವಹಿಸಿದ ಉದಾಹರಣೆ ಇಲ್ಲ. ಹೀಗಾಗಿ, ಟ್ರಂಪ್‌ ಅವರ ಎರಡನೇ ಅವಧಿಯ ಆಡಳಿತವು ಭಿನ್ನವಾಗಿರುವ ಸಾಧ್ಯತೆಯ ಬಗ್ಗೆ ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಟ್ರಂಟ್‌ ಅವರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದಾಗ, 2017ರ ಜನವರಿ 20ರಿಂದ 2021ರ ಜನವರಿ 20ರವರೆಗೆ ಅಧಿಕಾರದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.