ADVERTISEMENT

ಜಪಾನ್‌: ಕಟ್ಟಡವೊಂದರಲ್ಲಿ ಬೆಂಕಿ ದುರಂತ, 20ಕ್ಕೂ ಹೆಚ್ಚು ಮಂದಿ ಸಾವು

ಏಜೆನ್ಸೀಸ್
Published 17 ಡಿಸೆಂಬರ್ 2021, 11:28 IST
Last Updated 17 ಡಿಸೆಂಬರ್ 2021, 11:28 IST
ಒಸಾಕಾದಲ್ಲಿಯ ಕಚೇರಿ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು  –ಎಎಫ್‌ಪಿ ಚಿತ್ರ
ಒಸಾಕಾದಲ್ಲಿಯ ಕಚೇರಿ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು  –ಎಎಫ್‌ಪಿ ಚಿತ್ರ   

ಒಸಾಕಾ, ಜಪಾನ್‌: ಪಶ್ಚಿಮ ಜಪಾನ್‌ನ ಒಸಾಕಾ ನಗರದ ಕಟ್ಟಡವೊಂದರಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡ ಪರಿಣಾಮ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

‘ಈ ಘಟನೆಯಲ್ಲಿ 19 ಜನರು ಮೃತಪಟ್ಟಿದ್ದು, ಮೂವರು ಚೇತರಿಸಿಕೊಂಡಿದ್ದಾರೆ’ ಎಂದು ಸುದ್ದಿವಾಹಿನಿ ಎನ್‌ಎಚ್‌ಕೆ ಹಾಗೂ ಇತರ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ವರದಿಗಳನ್ನು ಅಧಿಕಾರಿಗಳು ದೃಢಪಡಿಸಿಲ್ಲ.

ಕಿಟಾಶಿಂಚಿಯ ಪ್ರಮುಖ ವ್ಯಾಪಾರ, ಶಾಪಿಂಗ್‌ ಮತ್ತು ಮನರಂಜನಾ ಪ್ರದೇಶದಲ್ಲಿಯ ಎಂಟು ಮಹಡಿಯ ಕಟ್ಟಡದ ನಾಲ್ಕನೇ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡಿದೆ.ಘಟನೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಒಸಾಕಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಅಕಿರಾ ಕಿಶಿಮೊಟೊ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.