ADVERTISEMENT

ರಕ್ಷಣಾ ಸಾಮರ್ಥ್ಯ ಹೆಚ್ಚಳ: ಜಪಾನ್‌ ಪ್ರಧಾನಿ ಕಿಶಿಡಾ ಶಪಥ

‘ಉತ್ತರ ಕೊರಿಯಾ, ಚೀನಾದಿಂದ ಬೆದರಿಕೆ ಎದುರಿಸಲು ಅಗತ್ಯ’

ಏಜೆನ್ಸೀಸ್
Published 27 ನವೆಂಬರ್ 2021, 6:00 IST
Last Updated 27 ನವೆಂಬರ್ 2021, 6:00 IST
ಫುಮಿಯೊ ಕಿಶಿಡಾ
ಫುಮಿಯೊ ಕಿಶಿಡಾ   

ಟೊಕಿಯೊ: ‘ದೇಶದ ಭದ್ರತೆಗೆ ಚೀನಾ ಹಾಗೂ ಉತ್ತರ ಕೊರಿಯಾದಿಂದ ಬೆದರಿಕೆ ಹೆಚ್ಚುತ್ತಿದೆ. ವೈರಿ ರಾಷ್ಟ್ರಗಳ ದಾಳಿಯಿಂದ ದೇಶವನ್ನು ರಕ್ಷಿಸಲು ಸೇನೆಯ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಪಾನ್‌ ಪ್ರಧಾನಿ ಫುಮಿಯೊ ಕಿಶಿಡಾ ಶನಿವಾರ ಶಪಥ ಮಾಡಿದರು.

ಪ್ರಧಾನಿ ಹುದ್ದೆಗೇರಿದ ನಂತರ ಮೊದಲ ಬಾರಿ ಸೇನೆಯ ಸನ್ನದ್ಧತೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದರು. ಟೊಕಿಯೊದ ಉತ್ತರಕ್ಕಿರುವ ಅಸಾಕದಲ್ಲಿನ ಸೇನಾ ನೆಲೆಯಲ್ಲಿ ನಡೆದ ಪರಿಶೀಲನಾ ಕಾರ್ಯಕ್ರಮದಲ್ಲಿ 800 ಪಡೆಗಳು ಪಾಲ್ಗೊಂಡಿದ್ದವು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

‘ಶತ್ರು ರಾಷ್ಟ್ರಗಳ ಸೇನಾನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡುವ ವ್ಯವಸ್ಥೆ ಹೊಂದುವುದು ಸೇರಿದಂತೆ ದೇಶದ ಮಿಲಿಟರಿ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಆಯ್ಕೆಗಳ ಪರಿಶೀಲನೆ ನಡೆಸಲಾಗುವುದು’ ಎಂದು ಕಿಶಿಡಾ ಹೇಳಿದರು.

ADVERTISEMENT

‘ಜಪಾನ್‌ನ ಭದ್ರತೆಗೆ ಸಂಬಂಧಿಸಿದ ಪರಿಸ್ಥಿತಿ ಮೊದಲಿನಂತೆ ಇಲ್ಲ. ಉತ್ತರ ಕೊರಿಯಾ ತನ್ನ ಕ್ಷಿಪಣಿ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ, ಅವುಗಳ ಪರೀಕ್ಷೆಗಳನ್ನು ಮುಂದುವರಿಸಿದೆ. ಚೀನಾ ಕೂಡ ಮಿಲಿಟರಿ ಬಲವನ್ನು ಹೆಚ್ಚಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.