ADVERTISEMENT

10 ವರ್ಷಗಳ ನಂತರ ಜಪಾನ್‌ನ ಅಣುಸ್ಥಾವರ ತಾತ್ಕಾಲಿಕ ಪುನರಾರಂಭ

ರಾಯಿಟರ್ಸ್
Published 13 ಮೇ 2021, 7:51 IST
Last Updated 13 ಮೇ 2021, 7:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ಫುಕುಶಿಮಾ ಅಣುವಿದ್ಯುತ್ ಸ್ಥಾವರದಲ್ಲಿ ಹತ್ತು ವರ್ಷಗಳ ಹಿಂದೆ ಸಂಭವಿಸಿದ ದುರಂತದ ಬಳಿಕ ಸ್ಥಗಿತವಾಗಿದ್ದ ಮಿಹಮಾದಲ್ಲಿನ ಅಣುವಿದ್ಯುತ್ ಸ್ಥಾವರವನ್ನು ಕನ್‌ಸೈ ಎಲೆಕ್ಟ್ರಿಕ್‌ ಪವರ್‌ ಕಂಪನಿ ಮುಂದಿನ ತಿಂಗಳು ಪುನರಾರಂಭಿಸಲಿದ್ದು, ಅಕ್ಟೋಬರ್‌ ವೇಳೆಗೆ ಮತ್ತೆ ಸ್ಥಗಿತಗೊಳಿಸಲಿದೆ.

ಜಪಾನ್‌ನಲ್ಲಿ ಇದೀಗ ಬಿರು ಬೇಸಿಗೆ ಇದ್ದು, ವಿದ್ಯುತ್‌ಗೆ ಭಾರಿ ಬೇಡಿಕೆ ಎದುರಾಗಿದೆ. ಇದನ್ನು ನಿಭಾಯಿಸುವ ಸಲುವಾಗಿ 40 ವರ್ಷಗಳಷ್ಟು ಹಳೆಯದಾಗಿರುವ ಮಿಹಿಮಾ ನಂ.3 ಅಣುಸ್ಥಾವರವನ್ನು ಪುನರಾರಂಭಿಸಲಾಗುತ್ತದೆ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಎಲ್ಲಾ ಅಣುವಿದ್ಯುತ್ ಸ್ಥಾವರಗಳು ಭಯೋತ್ಪಾದನೆ ನಿಗ್ರಹ ಭದ್ರತಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಕಾಲಮಿತಿಯಲ್ಲಿ ಈ ಸುರಕ್ಷತಾ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ. ಹೀಗಾಗಿ ಸುಮಾರು 4 ತಿಂಗಳು ವಿದ್ಯುತ್‌ ಉತ್ಪಾದಿಸಿದ ಬಳಿಕ ಈ ಅಣುಸ್ಥಾವರ ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.