ADVERTISEMENT

ವಿಪಕ್ಷ ಯುಎನ್‌ಪಿ ನೇತೃತ್ವ ವಹಿಸಲು ಸಿದ್ಧ: ಜಯಸೂರ್ಯ

ಪಿಟಿಐ
Published 24 ಆಗಸ್ಟ್ 2020, 11:13 IST
Last Updated 24 ಆಗಸ್ಟ್ 2020, 11:13 IST
ಕರು ಜಯಸೂರ್ಯ
ಕರು ಜಯಸೂರ್ಯ   

ಕೊಲಂಬೊ: ಶ್ರೀಲಂಕಾದ ಮಾಜಿ ಸ್ಪೀಕರ್ ಕರು ಜಯಸೂರ್ಯ ಅವರು ವಿರೋಧಪಕ್ಷ ಯುನೈಟೆಡ್ ನ್ಯಾಷನಲ್ ಪಾರ್ಟಿಯ (ಯುಎನ್‌ಪಿ) ನೇತೃತ್ವ ವಹಿಸಲು ಸಿದ್ಧನಿದ್ದೇನೆ ಎಂದಿದ್ದಾರೆ. ಈಚೆಗೆ ಮುಕ್ತಾಯವಾದ ಸಂಸತ್ ಚುನಾವಣೆಯಲ್ಲಿ ಯುಎನ್‌ಪಿ ಹೀನಾಯವಾಗಿ ಪರಾಭವಗೊಂಡಿತ್ತು.

ಮುಂದಿನ ತಿಂಗಳು 80ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಜಯಸೂರ್ಯ ಈ ಕುರಿತು ಹೇಳಿಕೆಯನ್ನು ನೀಡಿದ್ದು, ಪಕ್ಷ ಮುನ್ನಡೆಸಲು ನಾನು ಸಮರ್ಥನಿದ್ದೇನೆ ಎಂಬುದನ್ನು ಪಕ್ಷದ ಮುಖಂಡರ ಗಮನಕ್ಕೂ ತಂದಿದ್ದೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

1946ರಲ್ಲಿ ಸ್ಥಾಪನೆಯಾದ, ಶ್ರೀಲಂಕಾದ ಹಳೆಯ ಪಕ್ಷವಾದ ಯುಎನ್‌ಪಿ ಈಚೆಗೆ ನಡೆದ ಚುನಾವಣೆಯಲ್ಲಿ ಶೇ 2ರಷ್ಟು ಮಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.