ADVERTISEMENT

ಚೀನಾದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಳವಳ

ಏಜೆನ್ಸೀಸ್
Published 16 ನವೆಂಬರ್ 2021, 8:29 IST
Last Updated 16 ನವೆಂಬರ್ 2021, 8:29 IST
ಚೀನಾ–ಅಮೆರಿಕ ನಡುವಿನ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌
ಚೀನಾ–ಅಮೆರಿಕ ನಡುವಿನ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌   

ವಾಷಿಂಗ್ಟನ್‌: ಕ್ಸಿನ್‌ಜಿಯಾಂಗ್‌, ಟಿಬೆಟ್‌ ಮತ್ತು ಹಾಂಗ್‌ಕಾಂಗ್‌ನಲ್ಲಿ ಚೀನಿ ಕಮ್ಯುನಿಸ್ಟ್‌ ಪಕ್ಷ (ಪಿಆರ್‌ಸಿ) ನಡೆದುಕೊಳ್ಳುತ್ತಿರುವ ರೀತಿ ಮತ್ತು ಅಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಚೀನಾ– ಅಮೆರಿಕ ನಡುವಿನ ವರ್ಚುವಲ್‌ ಶೃಂಗಸಭೆಯಲ್ಲಿ ಮಾತನಾಡಿದ ಬೈಡನ್‌ ಅವರು, ತೈವಾನ್‌ನಲ್ಲಿನ ಯಥಾಸ್ಥಿತಿ ಬದಲಾವಣೆಯ ಕ್ರಮ ಸರಿಯಲ್ಲ ಎಂದು ಚೀನಾಗೆ ಎಚ್ಚರಿಕೆ ನೀಡಿದ್ದಾರೆ.

ತೈವಾನ್‌ನ ಯಥಾಸ್ಥಿತಿ ಬದಲಿಸುವ ಕ್ರಮವನ್ನು ಬಲವಾಗಿ ಖಂಡಿಸಿರುವ ಬೈಡನ್‌ ಅವರು, ತೈವಾನ್‌ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ ಎಂದ ಶ್ವೇತಭವನ ತಿಳಿಸಿದೆ.

ADVERTISEMENT

‘ಕೆಂಪುಗೆರೆ’ ದಾಟಿದರೆ ಕ್ರಮ– ಚೀನಾ ಎಚ್ಚರಿಕೆ (ಬೀಜಿಂಗ್ ವರದಿ) : ತೈವಾನ್‌ ಸ್ವಾತಂತ್ರ್ಯ ಪರವಾದ ಪಡೆಗಳು ‘ಕೆಂಪುಗೆರೆ’ ದಾಟಿದರೆ, ಚೀನಾ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಹೇಳಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ತಿಳಿಸಿದೆ.

ಉಭಯ ನಾಯಕರ ನಡುವಿನ ಶೃಂಗಸಭೆಯು ರಚನಾತ್ಮಕ, ಫಲಪ್ರದ, ವಸ್ತುನಿಷ್ಠವಾಗಿ ನಡೆದಿದೆ’ ಚೀನಾದ ಅಧಿಕೃತ ಸುದ್ಧಿ ಸಂಸ್ಥೆ ಕ್ಸಿನ್ಹುವಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.