ADVERTISEMENT

ತೈವಾನ್‌ ರಾಷ್ಟ್ರವೆಂದ ಜಾನ್‌ ಸೀನ: ಚೀನಿಯರ ಕ್ಷಮೆಯಾಚನೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 11:43 IST
Last Updated 26 ಮೇ 2021, 11:43 IST
ಜಾನ್ ಸೀನ
ಜಾನ್ ಸೀನ   

ತೈವಾನ್‌: ಹಾಲಿವುಡ್‌ ನಟ ಮತ್ತು ಡಬ್ಳ್ಯುಡಬ್ಳ್ಯುಇ ಸ್ಟಾರ್‌ ಜಾನ್‌ ಸೀನ ಚೀನಾದ ಜನತೆಯ ಕ್ಷಮೆಯಾಚಿಸುವ ಮೂಲಕ ಸುದ್ದಿಯಾಗಿದ್ದಾರೆ. 'ನಾನು ತಪ್ಪು ಮಾಡಿದ್ದೇನೆ. ನಾನೀಗ ಅತ್ಯಂತ ಪ್ರಮುಖವಾದುದನ್ನು ಹೇಳುತ್ತಿದ್ದೇನೆ. ಚೀನಾದ ಜನತೆಯನ್ನು ಗೌರವಿಸುತ್ತೇನೆ ಮತ್ತು ಪ್ರೀತಿಸುತ್ತೇನೆ. ನನ್ನ ತಪ್ಪನ್ನು ದಯವಿಟ್ಟು ಕ್ಷಮಿಸಿ' ಎಂದು ವಿಡಿಯೊ ಮೂಲಕ ಚೀನಾ ಸಾಮಾಜಿಕ ತಾಣ ವೈಬೊದಲ್ಲಿ ಪೋಸ್ಟ್‌ ಮಾಡಿದ್ದಾರೆ.

ವೈಬೊ ಎಂಬುದು ಟ್ವಿಟರ್‌ನಂತಹ ಸಾಮಾಜಿಕ ತಾಣವಾಗಿದ್ದು ಚೀನಾದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ.

ಚೀನಾದ ಭಾಗ ತೈವಾನ್‌ನಲ್ಲಿ ಹಾಲಿವುಡ್‌ ಸಿನಿಮಾ ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌ 9ರ ಪ್ರಮೋಷನ್‌ ವೇಳೆ ತೈವಾನ್‌ ಮೂಲದ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ 44 ವರ್ಷದ ಜಾನ್‌ಸೀನ ತೈವಾನ್‌ ತಮ್ಮ ಹೊಸ ಸಿನಿಮಾ ಫಾಸ್ಟ್‌ ಆ್ಯಂಡ್‌ ಫ್ಯೂರಿಯಸ್‌ 9 ನೋಡಿದ ಮೊದಲ ರಾಷ್ಟ್ರ ಎಂದೆನಿಸಿಕೊಳ್ಳಲಿದೆ ಎಂದು ಹೇಳಿದ್ದರು.
ಉಲ್ಲೇಖಿಸಿದ್ದರು.

ADVERTISEMENT

ತೈವಾನ್‌ ಚೀನಾದ ಪೂರ್ವ ಭಾಗದಲ್ಲಿರುವ ಪುಟ್ಟ ಧ್ವೀಪವಾಗಿದೆ. ಇದನ್ನು ಅಧಿಕೃತವಾಗಿ ರಿಪಬ್ಲಿಕ್‌ ಆಫ್‌ ಚೀನಾ ಎಂದು ಕರೆಯಲಾಗುತ್ತದೆ. 101 ಮಹಡಿಗಳಿರುವ ಗಗನಚುಂಬಿ ಕಟ್ಟಡ ತೈಪೆ ವಿಶ್ವಪ್ರಸಿದ್ಧವಾಗಿದೆ. ಏಷಿಯಾ ಪೆಸಿಫಿಕ್‌ ಭಾಗದ ರಾಷ್ಟ್ರಗಳ ಪೈಕಿ ಅತ್ಯಂತ ಮುಂದುವರಿದ ರಾಷ್ಟ್ರ ಎಂದೂ ಗುರುತಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.