ADVERTISEMENT

ಕೋವಿಡ್| ಗಣರಾಜ್ಯೋತ್ಸವಕ್ಕಾಗಿ ಕೈಗೊಂಡಿದ್ದ ಭಾರತ ಭೇಟಿ ರದ್ದುಗೊಳಿಸಿದ ಜಾನ್ಸನ್‌

ಬ್ರಿಟನ್‌ನಲ್ಲಿ ರೂಪಾಂತರ ವೈರಸ್‌ ಪ್ರಸರಣ ಹಿನ್ನೆಲೆಯಲ್ಲಿ ಈ ನಿರ್ಧಾರ

ಪಿಟಿಐ
Published 5 ಜನವರಿ 2021, 16:04 IST
Last Updated 5 ಜನವರಿ 2021, 16:04 IST
ಬೋರಿಸ್‌ ಜಾನ್ಸನ್‌
ಬೋರಿಸ್‌ ಜಾನ್ಸನ್‌   

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿತರಾಗಿದ್ದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು, ಆ ದೇಶದಲ್ಲಿ ರೂಪಾಂತರ ವೈರಸ್‌ ಸೋಂಕು ವ್ಯಾಪಕವಾಗುತ್ತಿರುವ ಕಾರಣ ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾರೆ.

‘ಬೋರಿಸ್‌ ಜಾನ್ಸನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಬ್ರಿಟನ್‌ನಲ್ಲಿ ರೂಪಾಂತರಿ ವೈರಸ್‌ನ ಪ್ರಸರಣ ಹೆಚ್ಚುತ್ತಿದೆ. ಹೀಗಾಗಿ ಭಾರತಕ್ಕೆ ಭೇಟಿ ನೀಡುವುದನ್ನು ರದ್ದುಗೊಳಿಸಬೇಕಾಯಿತು. ಇದಕ್ಕಾಗಿ ವಿಷಾದಿಸುವುದಾಗಿ ಜಾನ್ಸನ್‌ ತಿಳಿಸಿದರು’ ಎಂದು ಅಧಿಕಾರಿಗಳು ಹೇಳಿದರು.

ರೂಪಾಂತರಗೊಂಡ ಕೊರೊನಾ ವೈರಸ್‌ ತೀವ್ರವಾಗಿ ಪ್ರಸರಣವಾಗುತ್ತಿರುವ ಕಾರಣ ಬ್ರಿಟನ್‌ನಲ್ಲಿ ಬುಧವಾರದಿಂದ ಮತ್ತೆ ಲಾಕ್‌ಡೌನ್‌ ಘೋಷಿಸಲಾಗಿದೆ.

ADVERTISEMENT

ಹೈಕಮಿಷನರ್‌ ಆಗಿ ಎಲ್ಲಿಸ್‌ ನೇಮಕ

ಲಂಡನ್‌: ಭಾರತದಲ್ಲಿ ಬ್ರಿಟನ್‌ನ ನೂತನ ಹೈ ಕಮಿಷನರ್‌ ಆಗಿ ಅಲೆಕ್ಸ್‌ ಎಲ್ಲಿಸ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಫಾರಿನ್‌, ಕಾಮನ್‌ವೆಲ್ತ್ ಆ್ಯಂಡ್‌ ಡೆವಲೆಪ್‌ಮೆಂಟ್‌ ಆಫೀಸ್‌ (ಎಫ್‌ಸಿಡಿಒ) ಮಂಗಳವಾರ ತಿಳಿಸಿದೆ.

53 ವರ್ಷದ ಅಲೆಕ್ಸ್‌ ಅವರು ಬ್ರಿಟನ್‌ನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜತಾಂತ್ರಿಕ ವಿಷಯಗಳು, ಅಭಿವೃದ್ಧಿ ಹಾಗೂ ರಕ್ಷಣಾ ವಿದ್ಯಮಾನಗಳಲ್ಲಿ ಅವರು ಅಪಾರ ಅನುಭವ ಹೊಂದಿದ್ದಾರೆ.

ಈ ವರೆಗೆ ಭಾರತದಲ್ಲಿ ಹೈಕಮಿಷನರ್‌ ಆಗಿದ್ದ ಸರ್‌ ಫಿಲಿಪ್‌ ಬಾರ್ಟನ್‌ ಅವರು ಬ್ರಿಟನ್‌ಗೆ ಮರಳಿದ್ದು, ಎಫ್‌ಸಿಡಿಒದ ಕಾಯಂ ಅಧೀನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.