ADVERTISEMENT

ಲಾಹೋರ್: ತೀರ್ಪು ಪ್ರಶ್ನಿಸಿ ಕೋರ್ಟ್‌ಗೆ ಉಗ್ರ ಹಫೀಜ್ ಅರ್ಜಿ

ಪಿಟಿಐ
Published 8 ಮೇ 2025, 14:32 IST
Last Updated 8 ಮೇ 2025, 14:32 IST
ಹಫೀಜ್ ಸಯೀದ್
ಹಫೀಜ್ ಸಯೀದ್   

ಲಾಹೋರ್: ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸೂತ್ರಧಾರಿ ಮತ್ತು ನಿಷೇಧಿತ ಜಮಾತ್–ಉದ್–ದಾವಾ (ಜೆಯುಡಿ) ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್, ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ತನ್ನನ್ನು ತಪ್ಪಿತಸ್ಥ ಎಂಬುದಾಗಿ ನೀಡಿರುವ ತೀರ್ಪು ಪ್ರಶ್ನಿಸಿ ಲಾಹೋರ್‌ ಹೈಕೋರ್ಟ್‌ಗೆ  ಅರ್ಜಿ ಸಲ್ಲಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಸಯೀದ್ ಮತ್ತು ಜಮಾತ್–ಉದ್–ದಾವಾ ಸಂಘಟನೆಯ ಇತರ ಮುಖಂಡರು ಲಾಹೋರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ನ್ಯಾಯಾಲಯ ಸಮ್ಮತಿಸಿದೆ ಎಂದು ತಿಳಿಸಿದ್ದಾರೆ. 

ವಿಶ್ವಸಂಸ್ಥೆಯು ಸಯೀದ್‌ನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಿದೆ. ಪಾಕಿಸ್ತಾನ ಸರ್ಕಾರ 2019ರಲ್ಲಿ ಈತನನ್ನು ಬಂಧಿಸಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.