ಲಾಹೋರ್: ಬಾಂಗ್ಲಾದೇಶ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಪ್ರತಿಭಟನೆಗಳಲ್ಲಿ ತಮ್ಮ ಸಂಘಟನೆಯ ಪಾತ್ರವಿತ್ತು ಎಂದು ಮುಂಬೈ ದಾಳಿಯ ಸೂತ್ರಧಾರಿ ಹಫೀಜ್ ಸಯೀದ್ ನೇತೃತ್ವದ ನಿಷೇಧಿತ ಜಮಾತ್–ಉದ್–ದಾವಾದ ಕೆಲವು ಮುಖಂಡರು ಹೇಳಿದ್ದಾರೆ.
ಅಲಹಾಬಾದ್‌ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜೆಯುಡಿ ಸದಸ್ಯ ಸೈಫುಲ್ಲಾ ಕಸೂರಿ, ‘ನಾವು ಮುಂದಿನ ಪೀಳಿಗೆಯ ಜಿಹಾದ್‌ಗೆ ಸಿದ್ಧತೆ ನಡೆಸುತ್ತಿದ್ದೇವೆ. ಸಾವನ್ನಪ್ಪಲು ನಾವು ಹೆದರುವುದಿಲ್ಲ’ ಎಂದು ಹೇಳಿದ್ದಾನೆ.
ವಿಶ್ವಸಂಸ್ಥೆ ಪ್ರಕಟಿಸಿರುವ ಜಾಗತಿಕ ಉಗ್ರರ ಪಟ್ಟಿಯಲ್ಲಿ ಕಸೂರಿ ಹೆಸರು ಕೂಡ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.