ADVERTISEMENT

ಮೊದಲ ಸಲ ಮೌಂಟ್ ಏವರೆಸ್ಟ್ ಏರಿ ದಾಖಲೆ ಬರೆದಿದ್ದ ತಂಡದ ಸದಸ್ಯ ಕಾಂಚಾ ಶೆರ್ಪಾ ನಿಧನ

ಏಜೆನ್ಸೀಸ್
Published 16 ಅಕ್ಟೋಬರ್ 2025, 14:12 IST
Last Updated 16 ಅಕ್ಟೋಬರ್ 2025, 14:12 IST
ಕಾಂಚಾ ಶೆರ್ಪಾ
ಕಾಂಚಾ ಶೆರ್ಪಾ   

ಕಠ್ಮಂಡು: ಮೊದಲ ಬಾರಿಗೆ ಮೌಂಟ್‌ ಏವರೆಸ್ಟ್‌ ಏರಿ ದಾಖಲೆ ಬರೆದಿದ್ದ ತಂಡದ ಸದಸ್ಯರಾದ ಕಾಂಚಾ ಶೆರ್ಪಾ ಅವರು ಗುರುವಾರ ಮೃತಪಟ್ಟಿದ್ದಾರೆ ಎಂದು ನೇಪಾಳ ಪರ್ವತಾರೋಹಿಗಳ ಸಂಘ ತಿಳಿಸಿದೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಚಾ ಶೆರ್ಪಾ (92) ಅವರು, ನೇಪಾಳದ ಕಠ್ಮಂಡು ಜಿಲ್ಲೆಯ ಕಪನ್‌ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಘದ ಅಧ್ಯಕ್ಷ ಫುರ್ ಗೆಲ್ಜೆ ಶೆರ್ಪಾ ಅವರು ದೃಢಪಡಿಸಿದ್ದಾರೆ.

‘ಪರ್ವತಾರೋಹಣ ಇತಿಹಾಸದ ಒಂದು ಅಧ್ಯಾಯವು ಅವರೊಂದಿಗೆ ಕಣ್ಮರೆಯಾಗಿದೆ. ಅವರ ಅಂತಿಮ ವಿಧಿವಿಧಾನಗಳು ಸೋಮವಾರ ನೆರವೇರಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.