ADVERTISEMENT

ಪ್ರತಿಭಟನೆ ಅಂತ್ಯ: ಅಮೆರಿಕ– ಕೆನಡಾ ಸಂಪರ್ಕಿಸುವ ಸೇತುವೆ ಸಂಚಾರಕ್ಕೆ ಮತ್ತೆ ಮುಕ್ತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 12:29 IST
Last Updated 14 ಫೆಬ್ರುವರಿ 2022, 12:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಂಡ್ಸರ್‌(ಒಂಟಾರಿಯೊ): ಅಮೆರಿಕ– ಕೆನಡಾ ಸಂಪರ್ಕಿಸುವ ಸೇತುವೆಯು ಭಾನುವಾರ ತಡರಾತ್ರಿ ಸಂಚಾರಕ್ಕೆ ಮತ್ತೆ ಮುಕ್ತವಾಗಿದೆ. ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಈ ಸೇತುವೆಯಲ್ಲಿ ಒಂದು ವಾರದಿಂದ ಸಂಚಾರ ಸಾಧ್ಯವಾಗಿರಲಿಲ್ಲ.

‘ಕೆನಡಾ– ಅಮೆರಿಕ ನಡುವೆ ಸರಕು ಸಾಗಣೆಯ ಮುಕ್ತ ಸಂಚಾರಕ್ಕೆ ಈಗ ಅಂಬಾಸಡರ್‌ ಬ್ರಿಜ್‌ ಪೂರ್ಣ ಮುಕ್ತವಾಗಿದೆ’ಎಂದು ಡೆಟ್ರಾಯಿಟ್‌ ಇಂಟರ್‌ನ್ಯಾಷನಲ್‌ ಬ್ರಿಜ್‌ ಕಂಪನಿಯ ವಕ್ತಾರೆ ಎಸ್ತರ್‌ ಹೇಳಿದ್ದಾರೆ. ಅಮೆರಿಕದ ಡೆಟ್ರಾಯಿಟ್ ಮತ್ತು ಕೆನಡಾ ವಿಂಡ್ಸರ್‌ ನಗರಗಳ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.

ಉಭಯ ರಾಷ್ಟ್ರಗಳ ಶೇಕಡಾ 25ರಷ್ಟು ವಾಣಿಜ್ಯ ವ್ಯವಹಾರಗಳಿಗೆ ಈ ಸೇತುವೆ ಅವಕಾಶ ಮಾಡಿಕೊಡುತ್ತದೆ. ಕೆನಡಾ ಕಡೆ ಸೇತುವೆ ಬಳಿ ನಡೆಯುತ್ತಿದ್ದ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಇಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಭಾನುವಾರ ತಡರಾತ್ರಿ ಪ್ರತಿಭಟನೆ ಅಂತ್ಯಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.