ADVERTISEMENT

ನೈರುತ್ಯ ಕೊಲಂಬಿಯಾದಲ್ಲಿ ಅಪಹರಿಸಲ್ಪಟ್ಟಿದ್ದ 29 ಅಧಿಕಾರಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
ಏಜೆನ್ಸೀಸ್
Published 9 ಮಾರ್ಚ್ 2025, 2:53 IST
Last Updated 9 ಮಾರ್ಚ್ 2025, 2:53 IST
<div class="paragraphs"><p>ಬಂಧನ</p></div>

ಬಂಧನ

   

ಪ್ರಾತಿನಿಧಿಕ ಚಿತ್ರ

ಬೊಗೋಟಾ: ನೈರುತ್ಯ ಕೊಲಂಬಿಯಾದಲ್ಲಿ ಇತ್ತೀಚೆಗೆ ಅಪಹರಿಸಲ್ಪಟ್ಟಿದ್ದ 29 ಕಾನೂನು ಜಾರಿ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಘೋಷಿಸಿದ್ದಾರೆ.

ADVERTISEMENT

ಎಲ್ ಪ್ಲೇಟಾಡೊ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ದಾಳಿಯ ಸಂದರ್ಭದಲ್ಲಿ ಗುರುವಾರ 28 ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ಸೈನಿಕನನ್ನು ಅಪಹರಿಸಲಾಗಿತ್ತು.

ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಮತ್ತು ಅಧಿಕಾರಿಗಳ ಬಿಡುಗಡೆಗೆ ಸಹಕರಿಸಿದ್ದಕ್ಕಾಗಿ ಸ್ಯಾಂಚೆಜ್ ಸ್ಥಳೀಯ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಕಾರ್ಲೋಸ್ ಪಟಿನೊ ಎಂದು ಕರೆಯಲ್ಪಡುವ ಸಶಸ್ತ್ರ ಗುಂಪು ಈ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಅದರ ಸದಸ್ಯರು ಕೊಲಂಬಿಯಾದ ಹಿಂದಿನ ಕ್ರಾಂತಿಕಾರಿ ಸಶಸ್ತ್ರ ಪಡೆಗಳ ಭಿನ್ನಮತೀಯರಾಗಿದ್ದಾರೆ. ಈ ಗುಂಪು 2016 ರಲ್ಲಿ ಸರ್ಕಶರದ ಜೊತೆಗಿನ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

‘ನ್ಯಾಯಾಂಗವು ತನ್ನ ಕೆಲಸವನ್ನು ಮಾಡುತ್ತದೆ’ಎಂದು ಸಚಿವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನನಲ್ಲಿ ಬರೆದುಕೊಂಡಿದ್ದಾರೆ.

ಬಿಡುಗಡೆಯಾದವರು ಆರೋಗ್ಯವಾಗಿದ್ದು, ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.