ADVERTISEMENT

ಸೇನಾ ಪರೇಡ್‌: ಮಗಳೊಂದಿಗೆ ಕಿಮ್‌ ಭಾಗಿ

ಏಜೆನ್ಸೀಸ್
Published 9 ಫೆಬ್ರುವರಿ 2023, 12:34 IST
Last Updated 9 ಫೆಬ್ರುವರಿ 2023, 12:34 IST
ಬುಧವಾರ ರಾತ್ರಿ ರಾಜಧಾನಿ ಪ್ಯಾಂಗ್ಯಾಂಗ್‌ನಲ್ಲಿ ನಡೆದ ಸೇನಾ ಪರೇಡ್‌ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತಮ್ಮ ಮಗಳು ಕಿಮ್‌ ಜು ಎಯೊಂದಿಗೆ ಭಾಗಿಯಾದರು –ಎಎಫ್‌ಪಿ ಚಿತ್ರ
ಬುಧವಾರ ರಾತ್ರಿ ರಾಜಧಾನಿ ಪ್ಯಾಂಗ್ಯಾಂಗ್‌ನಲ್ಲಿ ನಡೆದ ಸೇನಾ ಪರೇಡ್‌ನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತಮ್ಮ ಮಗಳು ಕಿಮ್‌ ಜು ಎಯೊಂದಿಗೆ ಭಾಗಿಯಾದರು –ಎಎಫ್‌ಪಿ ಚಿತ್ರ   

ಸೋಲ್‌: ರಾಜಧಾನಿ ಪ್ಯಾಂಗ್ಯಾಂಗ್‌ನಲ್ಲಿ ನಡೆದ ಸೇನಾ ಪರೇಡ್‌ನಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ತಮ್ಮ 10 ವರ್ಷದ ಮಗಳು ಕಿಮ್‌ ಜು ಎ ಜೊತೆಯಲ್ಲಿ ಭಾಗಿಯಾದರು.

ಐದನೇ ಬಾರಿಗೆ ಕಿಮ್‌ ಜು ಎ, ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾಳೆ. ಜೊತೆಗೆ ಆಕೆಯನ್ನು ದೇಶದಲ್ಲಿ ಗೌರವಿಸಲಾಗುತ್ತಿದೆ ಹಾಗೂ ಪ್ರೀತಿಯಿಂದ ಕಾಣಲಾಗುತ್ತಿದೆ. ಆದ್ದರಿಂದ, ತಂದೆಯ ನಂತರ ಮಗಳೇ ಉತ್ತರಾಧಿಕಾರಿ ಆಗಬಹುದೇನೋ ಎನ್ನುವ ಚರ್ಚೆಯನ್ನು ಇದು ಹುಟ್ಟುಹಾಕಿದೆ.

ಬುಧವಾರ ರಾತ್ರಿ ನಡೆದ ಸೇನಾ ಪರೇಡ್‌ನಲ್ಲಿ ಸೇನೆ ಹೊಸದಾಗಿ ಸೇರ್ಪಡೆಯಾದ ಹೊಸ ಖಂಡಾಂತರ ಕ್ಷಿಪಣಿಯನ್ನು ಪ್ರದರ್ಶಿಸಲಾಗಿದೆ. ಈ ಕ್ಷಿಪಣಿಯ ಪರೀಕ್ಷೆಯನ್ನು ಮುಂಬರುವ ತಿಂಗಳಿನಲ್ಲಿ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.

ADVERTISEMENT

ನೆರೆಯ ರಾಷ್ಟ್ರಗಳು ಹಾಗೂ ಅಮೆರಿಕದೊಂದಿಗೆ ಹಳಸುತ್ತಿರುವ ಸಂಬಂಧದ ಕಾರಣ, ಉತ್ತರ ಕೊರಿಯಾವು ಇರುವ ಸೀಮಿತ ಸಂಪನ್ಮೂಲಗಳೊಂದಿಗೇ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.