ADVERTISEMENT

ವುಡ್ವರ್ಡ್‌ ಕೃತಿಯಲ್ಲಿ ಟ್ರಂಪ್ ವಿವಾದಾತ್ಮಕ ಹೇಳಿಕೆಗಳು

ಏಜೆನ್ಸೀಸ್
Published 10 ಸೆಪ್ಟೆಂಬರ್ 2020, 9:56 IST
Last Updated 10 ಸೆಪ್ಟೆಂಬರ್ 2020, 9:56 IST
ಪತ್ರಕರ್ತ ಬಾಬ್‌ ವೂಡ್ವರ್ಡ್‌
ಪತ್ರಕರ್ತ ಬಾಬ್‌ ವೂಡ್ವರ್ಡ್‌   

ವಾಷಿಂಗ್ಟನ್: ಇತ್ತೀಚೆಗೆ ಬಿಡುಗಡೆಯಾದ ಪತ್ರಕರ್ತ ಬಾಬ್‌ ವುಡ್ವರ್ಡ್‌ ಅವರ ‘ರೇಜ್‌'ಕೃತಿಯ ಆಯ್ದ ಭಾಗಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ವಿವಾದಾತ್ಮಕ ಹೇಳಿಕೆಗಳು ದಾಖಲಾಗಿವೆ.

ಕೃತಿಯ ಆಯ್ದ ಭಾಗಗಳಲ್ಲಿ ಟಂಪ್ ಅವರು ಹಿಂದೆ ಕೊರೊನಾ ಸೋಂಕು ಹರಡುವುದರ ವಿರುದ್ಧ ಆಡಿದ್ದ ಮಾತುಗಳಿವೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಕುರಿತು ಟ್ರಂಪ್ ಮನದಲ್ಲಿರುವ ಯೋಜನೆಗಳೂ ದಾಖಲಾಗಿವೆ.

2018ರಲ್ಲಿ ಸಿಂಗಪುರದಲ್ಲಿ ಮೊದಲ ಬಾರಿಗೆ ತನ್ನನ್ನು ಭೇಟಿಯಾದಕಿಮ್‌ ಜಾಂಗ್‌ ಅವರು ತನ್ನ ಚಿಕ್ಕಪ್ಪನನ್ನು ಕೊಂದಿದ್ದು ಸೇರಿದಂತೆ ಅನೇಕ ವಿಚಾರಗಳನ್ನು ತನ್ನೊಡನೆ ಹಂಚಿಕೊಂಡಿರುವುದಾಗಿ ಟ್ರಂಪ್ ಹೇಳಿರುವುದು ಈ ಕೃತಿಯಲ್ಲಿ ದಾಖಲಾಗಿದೆ.

ADVERTISEMENT

ಪತ್ರಕರ್ತ ವುಡ್ವರ್ಡ್‌ ಅವರು ಟ್ರಂಪ್ ಅವರೊಂದಿಗೆ ಡಿಸೆಂಬರ್‌ನಿಂದ ಜುಲೈ ತಿಂಗಳ ನಡುವೆ ನಡೆಸಿದ 18 ಸಂದರ್ಶನಗಳ ಆಧಾರದ ಮೇಲೆ ಬರೆದಿರುವ ಕೆಲವು ಅಧ್ಯಾಯಗಳು ಈ ಕೃತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.