ADVERTISEMENT

ಕೋಬಿ ಬ್ರಯಾಂಟ್‌ ಮೃತದೇಹ ಪತ್ತೆ

ಏಜೆನ್ಸೀಸ್
Published 29 ಜನವರಿ 2020, 19:45 IST
Last Updated 29 ಜನವರಿ 2020, 19:45 IST
   

ಲಾಸ್ ಏಂಜಲೀಸ್ : ಕ್ಯಾಲಿಫೋರ್ನಿಯಾದ ಕ್ಯಾಲಬಾಸಸ್‌ ಬಳಿ ಹೆಲಿಕಾಪ್ಟರ್‌ ಅವಘಡದಲ್ಲಿ ಮೃತಪಟ್ಟ ಅಮೆರಿಕದ ಎನ್‌ಬಿಎ ನಿವೃತ್ತ ತಾರೆ ಕೋಬಿಬ್ರಯಾಂಟ್‌ ಮೃತದೇಹ ಬುಧವಾರ ಪತ್ತೆಯಾಗಿದೆ.

ಅಪಘಾತ ಸಂಭವಿಸಿ ಮೂರನೇ ದಿನ ವೈದ್ಯಕೀಯ ಸಿಬ್ಬಂದಿ ನಾಲ್ಕು ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಇದಕ್ಕಾಗಿ ಬೆರಳಚ್ಚು ತಜ್ಞರ ನೆರವು ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೈಲಟ್ ಅರಾ ಜೊಬಯಾನ್, ಬೇಸ್‌ಬಾಲ್ ಕೋಚ್ ಜಾನ್ ಆಲ್ಟೊಬೆಲಿ ಮತ್ತು ಸಾರಾ ಚೆಸ್ಟೆರ್ ಅವರ ಮೃತದೇಹಗಳು ಕೂಡ ಸಿಕ್ಕಿದ್ದು ಉಳಿದ ಐವರ ಶವಗಳು ಇನ್ನಷ್ಟೇ ಸಿಗಬೇಕು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.