ADVERTISEMENT

ಫಿಲಿಪ್ಪೀನ್ಸ್‌ನಲ್ಲಿ ಭೂ ಕುಸಿತ: ಅಪ್ರಾಪ್ತ ವಯಸ್ಸಿನ 27 ಮಂದಿ ಕಣ್ಮರೆ

ಏಜೆನ್ಸೀಸ್
Published 7 ಫೆಬ್ರುವರಿ 2024, 15:49 IST
Last Updated 7 ಫೆಬ್ರುವರಿ 2024, 15:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಉಂಟಾದ ಭೂಕುಸಿತದಲ್ಲಿ ಅಪ್ರಾಪ್ತ ವಯಸ್ಸಿನ 27 ಮಂದಿ ಕಣ್ಮರೆಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಾವೊ ಡಿ ಒರೊ ಪ್ರಾಂತ್ಯದ ಮಕೊ ಪಟ್ಟಣದ ಬಳಿಯ ಮಸರಾ ಹಳ್ಳಿಯ ಮನೆಗಳ ಮೇಲೆ ಪರ್ವತದ ಪಾರ್ಶ್ವವೊಂದು ಮಂಗಳವಾರ ರಾತ್ರಿ ಕುಸಿದ್ದುಬಿದ್ದಿದ್ದು, ಎಷ್ಟು ಮಂದಿ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, 11 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಎಡ್ವರ್ಡ್ ಮಕಪಿಲಿ ತಿಳಿಸಿದ್ದಾರೆ.                    

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.