ADVERTISEMENT

ನೇಪಾಳದಲ್ಲಿ ಭೂಕುಸಿತ: ಏಳು ಭಾರತೀಯರು ಸೇರಿ 65 ಜನ ನಾಪತ್ತೆ

ಏಜೆನ್ಸೀಸ್
Published 12 ಜುಲೈ 2024, 3:22 IST
Last Updated 12 ಜುಲೈ 2024, 3:22 IST
<div class="paragraphs"><p>ಭೂಕುಸಿತ</p></div>

ಭೂಕುಸಿತ

   

ಕಠ್ಮಂಡು: ನೇಪಾಳದ ತ್ರಿಶೂಲಿ ನದಿ ಸಮೀ‍ಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು ಏಳು ಭಾರತೀಯರು ಸೇರಿ 65 ಜನ ನಾಪತ್ತೆಯಾಗಿದ್ದಾರೆ.

65 ಜನ ಪ್ರಯಾಣಿಕರಿದ್ದ ಎರಡು ಬಸ್ಸುಗಳು ನದಿಯಲ್ಲಿ ಕೊಚ್ಚಿ ಹೋಗಿವೆ ಎನ್ನಲಾಗುತ್ತಿದೆ.

ADVERTISEMENT

ಇಬ್ಬರು ಚಾಲಕರು ಸೇರಿದಂತೆ ಬಸ್‌ಗಳಲ್ಲಿ ಇದ್ದ 65 ಜನ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ 3.30ರ ಸುಮಾರಿಗೆ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ ಎಂದು ನೇಪಾಳದ ಪೊಲೀಸರು ತಿಳಿಸಿದ್ದಾರೆ.

ಘಟನೆ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಶೋಧ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ ಎಂದು ಮದನ್‌ ನಗರದ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.