ಲಿಲಾಂಗ್ ವಿ (ಮಲಾವಿ ) (ಎಎಫ್‌ಪಿ): ನೈರುತ್ಯ ಆಫ್ರಿಕಾದ ಮಲಾವಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಮೃತಪಟ್ಟಿದ್ದಾರೆ. ರಂಫಿ ಜಿಲ್ಲೆಯಲ್ಲಿನ ಈ ಅವಘಡದಲ್ಲಿ ಐವರು ಕಣ್ಮರೆಯಾಗಿದ್ದಾರೆ. ಗಾಯಗೊಂಡ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿರಂತರವಾಗಿ ಸುರಿದ ಮಳೆ ಯಿಂದಾಗಿ ಭೂಕುಸಿತ ಸಂಭವಿಸಿದೆ. ಮಳೆಯಿಂದಾಗಿ ಒಂದೀಡಿ ಗ್ರಾಮವೇ ಕೊಚ್ಚಿ ಹೋಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೂಕುಸಿತದಿಂದಾಗಿ ತೊಂದರೆಗೊಳಗಾದ ಪ್ರದೇಶಕ್ಕೆ ರಕ್ಷಣಾ ತಂಡ ತಲುಪಲುಸಾಧ್ಯವಾಗುತ್ತಿಲ್ಲ ಎಂದು ರಂಫಿ ಜಿಲ್ಲಾ ಕೌನ್ಸಿಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬೆಟ್ಟಗಳಿಂದ ಬೃಹತ್ ಬಂಡೆಗಳು ಉರುಳುತ್ತಿರುವುದರಿಂದ ಅವುಗಳ ಅಡಿಗೆ ಜನರು ಸಿಕ್ಕಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.