ADVERTISEMENT

ಶ್ರೀಲಂಕಾ: ಕಡಿಮೆ ಆದಾಯದ ಕುಟುಂಬಗಳಿಗೆ ನಗದು ನೆರವು

ಪಿಟಿಐ
Published 3 ಮೇ 2022, 14:32 IST
Last Updated 3 ಮೇ 2022, 14:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ತೀವ್ರವಾಗಿ ಬಾಧಿತರಾದವರಿಗೆ ₹3000 ರಿಂದ ₹7,500 ರವರೆಗೆ ನಗದು ನೆರವು ನೀಡಲಾಗುವುದು ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿದ ವ್ಯಾಪಾರ ಸಚಿವ ಶೆಹನ್‌ ಸೇಮಸಿಂಘೆ, ‘ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಗದು ನೆರವು ಕಾರ್ಯಕ್ಕೆ ವಿಶ್ವ ಬ್ಯಾಂಕ್‌ ಸಹಾಯ ಮಾಡಲಿದೆ’ ಎಂದರು.

‘ಒಟ್ಟು 33 ಲಕ್ಷ ಫಲಾನುಭವಿ ಕುಟುಂಬಗಳನ್ನು ಗುರುತಿಸಲಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಡು ಬಡವರು, ವೃದ್ಧರು, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಅಂಗವಿಕಲರಿಗೆ ತೀವ್ರವಾಗಿಬಳಲುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ತಕ್ಷಣದ ಪರಿಹಾರದ ಅಗತ್ಯವನ್ನು ಸರ್ಕಾರ ಗುರುತಿಸಿದೆ’ ಎಂದರು.

ADVERTISEMENT

‘ನಗದು ನೆರವು ಕಾರ್ಯಕ್ಕೆ ವಿಶ್ವ ಬ್ಯಾಂಕ್‌ ಹಣಕಾಸಿನ ಸಹಾಯದ ಜೊತೆ ತಾಂತ್ರಿಕ ನೆರವನ್ನೂ ಒದಗಿದಲಿದೆ. ಪರಿಹಾರ ಹಣದ ವರ್ಗಾವಣೆಯು ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಜಮೆಯಾಗಲಿದೆ. ಅರ್ಹ ನಾಗರಿಕರು ಬ್ಯಾಂಕ್‌ ಖಾತೆ ಹೊಂದಿಲ್ಲದಿದ್ದರೆ, ಅಂಥವರು ಕೂಡಲೇ ಖಾತೆ ತೆರೆಯುವಂತೆ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಸೂಚಿಸಲಿದ್ದಾರೆ’ ಎಂದುಸೇಮಸಿಂಘೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.