ADVERTISEMENT

ಶ್ರೀಲಂಕಾ: ಹೊಸ ಸರ್ಕಾರ ನಡೆಸಲು ‘ಎಸ್‌ಜೆಬಿ’ ಸಿದ್ಧ

ಪಿಟಿಐ
Published 11 ಜುಲೈ 2022, 13:48 IST
Last Updated 11 ಜುಲೈ 2022, 13:48 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಕೊಲಂಬೊ: ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾವನ್ನು ಸ್ಥಿರ ಸ್ಥಿತಿಗೆ ತರಲು ಮುಂದಿನ ಸರ್ಕಾರವನ್ನು ಮುನ್ನಡೆಸಲು ಸಿದ್ಧವಿರುವುದಾಗಿ ಅಲ್ಲಿನ ಪ್ರಮುಖ ವಿರೋಧಪಕ್ಷ ಸಮಗಿ ಜನ ಬಲವೇಗಯಾ (ಎಸ್‌ಜೆಬಿ) ಸೋಮವಾರ ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಎಸ್‌ಜೆಬಿಯ ನಾಯಕ ಸಜಿತ್ ಪ್ರೇಮದಾಸ ಅವರು, ‘ತಮ್ಮ ಪಕ್ಷವು ಅಧ್ಯಕ್ಷ ಮತ್ತು ಪ್ರಧಾನಿ ಮಟ್ಟದಲ್ಲಿ ದೇಶವನ್ನು ಮುನ್ನಡೆಸಲು ಹಾಗೂ ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸಲು ಸಿದ್ಧವಾಗಿದೆ’ ಎಂದು ಹೇಳಿದ್ದಾರೆ ಎಂದು ‘ಎಕಾನಮಿ ನೆಕ್ಸ್ಟ್’ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

‘ನಾವು ಶ್ರೀಲಂಕಾದಲ್ಲಿ ಅಧ್ಯಕ್ಷ ಮತ್ತು ಮತ್ತು ಪ್ರಧಾನಿ ನೇತೃತ್ವದ ಸರ್ಕಾರವನ್ನು ನೇಮಿಸುತ್ತೇವೆ. ಬೇರೆ ಪರ್ಯಾಯ ಮಾರ್ಗವಿಲ್ಲ. ಯಾರಾದರೂ ಇದನ್ನು ವಿರೋಧಿಸಿದರೆ ಅಥವಾ ಸಂಸತ್ತಿನಲ್ಲಿ ಅದನ್ನು ಹಾಳು ಮಾಡಲು ಪ್ರಯತ್ನಿಸಿದರೆ ನಾವು ಅದನ್ನು ದೇಶದ್ರೋಹಿ ಕೃತ್ಯವಾಗಿ ನೋಡುತ್ತೇವೆ’ ಎಂದೂ ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.