ADVERTISEMENT

ಶ್ರೀಲಂಕಾ: ಮಧ್ಯಂತರ ಸರ್ಕಾರ ರಚನೆಗೆ ಪ್ರಧಾನಿ ರಾಜಪಕ್ಸ ನಕಾರ

ಪಿಟಿಐ
Published 23 ಏಪ್ರಿಲ್ 2022, 11:41 IST
Last Updated 23 ಏಪ್ರಿಲ್ 2022, 11:41 IST
ಮಹಿಂದಾ ರಾಜಪಕ್ಸ, ಶ್ರೀಲಂಕಾ ಪ್ರಧಾನಿ
ಮಹಿಂದಾ ರಾಜಪಕ್ಸ, ಶ್ರೀಲಂಕಾ ಪ್ರಧಾನಿ   

ಕೊಲಂಬೊ: ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಹೊಸ ಮಧ್ಯಂತರ ಸರ್ಕಾರ ರಚನೆಯಾಗಬೇಕೆಂಬ ಜನರ ಆಗ್ರಹವನ್ನು ಪ್ರಧಾನಿ ಮಹಿಂದಾ ರಾಜಪಕ್ಸ ಅವರು ನಿರಾಕರಿಸಿದ್ದಾರೆ. ಅಲ್ಲದೆ ದೇಶಕ್ಕೆ ಎದುರಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಮಧ್ಯಂತರ ಸರ್ಕಾರ ರಚನೆಯಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟು ಬಗ್ಗೆ ಪ್ರತಿಕ್ರಿಯಿಸಿದ ರಾಜಪಕ್ಸ ಅವರು, 'ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುವ ತಾಳ್ಮೆಯನ್ನು ಜನರು ತೋರಬೇಕು. ಮಾತುಕತೆ ಬೇಡವಾಗಿದ್ದರೆ, ಅವರು ಪ್ರತಿಭಟನೆ ಮಾಡಿಕೊಂಡೇ ಇರಲಿ' ಹೇಳಿದ್ದಾರೆ.

ಹಣಕಾಸು ಬಿಕ್ಕಟ್ಟಿನ ಪರಿಣಾಮ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಜೊತೆಗೆ ಇಂಧನ, ಔಷಧಗಳ ಕೊರತೆ ಉಂಟಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾವಿರಾರು ಜನರು ದೇಶದಾದ್ಯಂತ ಏಪ್ರಿಲ್ 9ರಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.