ADVERTISEMENT

ಉಕ್ರೇನ್‌ ಬಿಕ್ಕಟ್ಟು: ರಷ್ಯಾ, ಅಮೆರಿಕದತ್ತ ಫ್ರಾನ್ಸ್‌, ಜರ್ಮನಿ ನಾಯಕರು

ಏಜೆನ್ಸೀಸ್
Published 7 ಫೆಬ್ರುವರಿ 2022, 14:11 IST
Last Updated 7 ಫೆಬ್ರುವರಿ 2022, 14:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಸ್ಕೊ (ಎಪಿ): ಉಕ್ರೇನ್‌ ಬಿಕ್ಕಟ್ಟನ್ನು ಶಮನಗೊಳಿಸುವ ಅಂತರರಾಷ್ಟ್ರೀಯ ನಾಯಕರ ಪ್ರಯತ್ನ ಸೋಮವಾರ ತೀವ್ರ ಸ್ವರೂಪ ಪಡೆದಿದೆ. ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರೋನ್‌ ಮಾಸ್ಕೊದಲ್ಲಿ ಮಾತುಕತೆ ನಡೆಸಲು ಸಜ್ಜಾಗಿದ್ದರೆ, ವಾಷಿಂಗ್ಟನ್‌ನಲ್ಲಿರುವ ಜರ್ಮನಿಯ ಚಾನ್ಸಲರ್‌ ಒಲಾಫ್‌ ಸ್ಕೋಲ್ಜ್‌ ತಮ್ಮ ಪ್ರಯತ್ನ ನಡೆಸಿದ್ದಾರೆ.

ಉಕ್ರೇನ್‌ನ ಗಡಿಯಲ್ಲಿ ಸುಮಾರು 1 ಲಕ್ಷ ರಷ್ಯನ್‌ ಪಡೆ ಜಮಾಯಿಸಿದ್ದು, ಯಾವುದೇ ಕ್ಷಣದಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸುವ ಆತಂಕ ಮನೆಮಾಡಿದೆ.

‘ರಷ್ಯಾ ಯಾವಾಗ ಬೇಕಾದರೂ ಉಕ್ರೇನ್‌ ಅನ್ನು ಆಕ್ರಮಿಸಬಹುದು. ಇದು ದೊಡ್ಡ ಮಾನವ ಸಂಘರ್ಷಕ್ಕೆ ಕಾರಣವಾಗಲಿದೆ’ ಎಂದು ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲ್ಲಿವಾನ್‌ ಎಚ್ಚರಿಸಿದ್ದಾರೆ. ‌

ADVERTISEMENT

ಆದರೆ ಈ ಆರೋಪವನ್ನು ರಷ್ಯಾ ತಳ್ಳಿ ಹಾಕುತ್ತಲೇ ಬಂದಿದ್ದು, ಉಕ್ರೇನ್‌ ಮತ್ತು ಸೋವಿಯತ್‌ ಒಕ್ಕೂಟದ ಇತರ ರಾಷ್ಟ್ರಗಳು ನ್ಯಾಟೊ ಸೇರುವಂತೆ ಒತ್ತಾಯ ಮಾಡಬಾರದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.