ADVERTISEMENT

ಕೆಲಸ ಸಿಗದೆ ಬೇಸತ್ತಿದ್ದ ಯುವಕನಿಗೆ ನಿಂತಲ್ಲೇ ಸಿಕ್ಕಿದ ನೂರಾರು ಉದ್ಯೋಗಾವಕಾಶ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2021, 12:20 IST
Last Updated 26 ನವೆಂಬರ್ 2021, 12:20 IST
ಹೈದರ್‌ ಮಲಿಕ್‌ ಅವರು ತಮ್ಮ ಲಿಂಕ್ಡ್‌ಇನ್‌ ಪ್ರೊಫೈಲ್‌ನಲ್ಲಿ ಹಂಚಿಕೊಂಡಿರುವ ಚಿತ್ರ
ಹೈದರ್‌ ಮಲಿಕ್‌ ಅವರು ತಮ್ಮ ಲಿಂಕ್ಡ್‌ಇನ್‌ ಪ್ರೊಫೈಲ್‌ನಲ್ಲಿ ಹಂಚಿಕೊಂಡಿರುವ ಚಿತ್ರ   

ಲಂಡನ್‌: 24 ವರ್ಷದ ಯುವಕನೊಬ್ಬ ನಿಂತಲ್ಲೇ ಕೆಲಸ ಗಿಟ್ಟಿಸಿಕೊಂಡು ವಿಶ್ವದ ಗಮನ ಸೆಳೆದಿದ್ದಾನೆ. ಉದ್ಯೋಗಕ್ಕಾಗಿ ಸಾಕಷ್ಟು ಅಲೆದು, ಆನ್‌ಲೈನ್‌ ಸಂದರ್ಶನಗಳನ್ನು ಎದುರಿಸಿ, ಎಲ್ಲಿಯೂ ಸೂಕ್ತ ಉದ್ಯೋಗ ಸಿಗದೆ ನಿರಾಸೆ ಹೊಂದಿದ್ದ ಯುವಕನಿಗೆ ತನ್ನಚಾಣಕ್ಷತೆಯಿಂದ ನಿಂತಲ್ಲೇ ಉದ್ಯೋಗ ಹುಡುಕಿಕೊಂಡು ಬಂದಿದೆ.

ಇಮ್ಯಾನುವೆಲ್‌ ಫಾಜುಯಿಗ್‌ಬೆ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಪೋಸ್ಟ್‌

ಲಂಡನ್‌ನಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಹೈದರ್‌ ಮಲಿಕ್‌ ಬ್ಯಾಂಕಿಂಗ್‌ ಮತ್ತು ಫೈನಾನ್ಸ್‌ ವಿಭಾಗದಲ್ಲಿ ಪ್ರಥಮ ಶ್ರೇಣಿಯ ಡಿಗ್ರಿ ಪಡೆದ ಪ್ರತಿಭಾನ್ವಿತ. ಮಿಡಲ್‌ಸೆಕ್ಸ್‌ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ಹೈದರ್‌ ಜೂಮ್‌ ಸಂದರ್ಶನಗಳಲ್ಲಿ ನಿರಂತರವಾಗಿ ವೈಫಲ್ಯಗಳನ್ನು ಎದುರಿಸಿ ನಿರಾಶೆಗೊಂಡಿದ್ದರು. ಆನ್‌ಲೈನ್‌ ಸಂದರ್ಶನದಲ್ಲಿ ಹೈದರ್‌ ತನ್ನ ಪ್ರತಿಭೆಯನ್ನು ತೋರ್ಪಡಿಸಲು ಸಾಧ್ಯವಾಗದೆ ನಿರುದ್ಯೋಗಿಯಾಗೇ ಉಳಿದಿದ್ದರು.

ನವೆಂಬರ್‌ 2ರಂದು ಹೈದರ್‌ ಅವರು ಕ್ಯಾನರಿ ವಾರ್ಫ್‌ ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ಜಾಹೀರಾತು ಫಲಕದೊಂದಿಗೆ ಉದ್ಯೋಗದ ನಿರೀಕ್ಷೆಯಲ್ಲಿ ನಿಂತುಕೊಂಡರು. ಲಿಂಕ್ಡ್‌ಇನ್‌ ಪ್ರೊಫೈಲ್‌ ಮತ್ತು ಸ್ವವಿವರ ಪತ್ರಗಳು ಕ್ಯೂಆರ್‌ ಕೋಡ್‌ ಮೂಲಕ ಲಭ್ಯವಿರುವಂತೆ ವಿನ್ಯಾಸಿಸಿದ ಫಲಕದಲ್ಲಿ ತನ್ನ ಅರ್ಹತೆಗಳನ್ನು ಪ್ರದರ್ಶಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಹೈದರ್‌ಗೆ ಸಾಕಷ್ಟು ಉದ್ಯೋಗಾವಕಾಶಗಳು ಹುಡುಕಿ ಬಂದವು. ಇದೀಗ ಹೈದರ್‌ ಕ್ಯಾನೆರಿ ವಾರ್ಫ್‌ ಗ್ರೂಪ್‌ನ ಟ್ರೆಸರಿ ಅನಾಲಿಸ್ಟ್‌ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಹದಿಹರೆಯದಲ್ಲಿ ಪಾಕಿಸ್ತಾನದಿಂದ ಬ್ರಿಟನ್‌ಗೆ ವಲಸೆ ಬಂದು ನೆಲೆಸಿದ ತಂದೆ ಮೊಹಮೂದ್‌ ಮಲಿಕ್‌ ಅವರಿಂದಸ್ಫೂರ್ತಿ ಪಡೆದು ಈ ಪ್ರಯತ್ನಕ್ಕೆ ಕೈ ಹಾಕಿದ್ದಾಗಿ ಹೈದರ್‌ ತಿಳಿಸಿದ್ದಾರೆ. ಇಮ್ಯಾನುವೆಲ್‌ ಫಾಜುಯಿಗ್‌ಬೆ ಎಂಬುವವರು ಹೈದರ್‌ ಜಾಹೀರಾತು ಫಲಕದೊಂದಿಗೆ ನಿಂತಿರುವ ಫೋಟೊವನ್ನು ಲಿಂಕ್ಡ್‌ಇನ್‌ನಲ್ಲಿ ಪ್ರಕಟಿಸಿದ್ದರು. ಬಳಿಕ ಪೋಸ್ಟ್‌ ವೈರಲ್‌ ಆಗಿತ್ತು.

ಉದ್ಯೋಗಕ್ಕಾಗಿ ಫಲಕ ಹಿಡಿದು ನಿಂತ ದಿನದ ಚಿತ್ರ ಮತ್ತು ಕ್ಯಾನೆರಿ ವಾರ್ಫ್‌ ಗ್ರೂಪ್‌ನ ಉದ್ಯೋಗಿಯಾದ ಬಳಿಕದ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.