ADVERTISEMENT

'ತೂಕ ಇಳಿಸಿ, ಇಲ್ಲವೇ ಶಿಕ್ಷೆ ಅನುಭವಿಸಿ'

ವಿಮಾನ ಕ್ಯಾಬಿನ್‌ ಸಿಬ್ಬಂದಿಗೆ ನೋಟಿಸ್‌ ನೀಡಿದ ಪಿಐಎ

ಪಿಟಿಐ
Published 6 ಜನವರಿ 2019, 18:30 IST
Last Updated 6 ಜನವರಿ 2019, 18:30 IST

ಇಸ್ಲಾಮಾಬಾದ್‌: ಆರು ತಿಂಗಳೊಳಗೆ ತೂಕ ಇಳಿಸಿಕೊಂಡು ‘ಸ್ಲಿಮ್‌, ಸ್ಮಾರ್ಟ್ ಮತ್ತು ಫಿಟ್‌‘ ಆಗಿರಿ, ಇಲ್ಲವೇ ಶಿಕ್ಷೆ ಅನುಭವಿಸಿ ಎಂದು ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ತನ್ನ ಬೊಜ್ಜುದೇಹಿ ಕ್ಯಾಬಿನ್‌ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ. ಸುಮಾರು 1,800 ಸಿಬ್ಬಂದಿ ಹೊಸ ವರ್ಷದ ಮೊದಲ ದಿನ ಈ ಸಂಬಂಧ ನೋಟಿಸ್‌ ಪಡೆದಿದ್ದಾರೆ.

ಸಿಬ್ಬಂದಿಯು ತಮ್ಮ ಎತ್ತರ ಮತ್ತು ದೇಹಾಕಾರಕ್ಕೆ ಅನುಗುಣವಾಗಿ ತೂಕ ಕಾಯ್ದುಕೊಳ್ಳಬೇಕಾದ ಸಲಹಾ ಚಾರ್ಟ್ ಅನ್ನು ಸಂಸ್ಥೆ ಬಿಡುಗಡೆ
ಮಾಡಿದೆ. ಅದರ ಪ್ರಕಾರ, 5 ಅಡಿ 7 ಇಂಚು ಎತ್ತರವಿರುವಮಹಿಳಾ ಸಿಬ್ಬಂದಿ 60ರಿಂದ 66 ಕೆ.ಜಿ ತೂಕ ಕಾಯ್ದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT