ADVERTISEMENT

ಜಪಾನ್‌ನಲ್ಲಿ ಮತ್ತೆ ಭೂಕಂಪ; ಸುನಾಮಿ ಭೀತಿ ಇಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2024, 10:45 IST
Last Updated 9 ಜನವರಿ 2024, 10:45 IST
<div class="paragraphs"><p>(ಚಿತ್ರ ಕೃಪೆ: X/<a href="https://twitter.com/NCS_Earthquake">@NCS_Earthquake</a>)</p></div>

(ಚಿತ್ರ ಕೃಪೆ: X/@NCS_Earthquake)

   

ಟೊಕಿಯೊ: ಜಪಾನ್‌ನಲ್ಲಿ ಮತ್ತೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಜಪಾನ್‌ನ ಹೊನ್ಶು ದ್ವೀಪದ ಪಶ್ಚಿಮ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

ADVERTISEMENT

ಭೂಕಂಪದ ಕೇಂದ್ರ ಬಿಂದು 46 ಕಿ.ಮೀ. ಆಳದಲ್ಲಿ ದಾಖಲಾಗಿದೆ. ತೀವ್ರ ಭೂಕಂಪವಾದರೂ ಸುನಾಮಿ ಭೀತಿ ಇಲ್ಲ ಎಂದು ತಿಳಿದು ಬಂದಿದೆ.

ಜಪಾನ್‌ನಲ್ಲಿ ಹೊಸ ವರ್ಷದಂದು ಸಂಭವಿಸಿದ್ದ ಸರಣಿ ಭೂಕಂಪದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಭಾರಿ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.