ADVERTISEMENT

ವ್ಯಾನುವಾಟು ಸಮುದ್ರ ತೀರದಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ರಾಯಿಟರ್ಸ್
Published 17 ಡಿಸೆಂಬರ್ 2024, 4:13 IST
Last Updated 17 ಡಿಸೆಂಬರ್ 2024, 4:13 IST
<div class="paragraphs"><p>ಐಸ್ಟಾಕ್ ಚಿತ್ರ</p></div>

ಐಸ್ಟಾಕ್ ಚಿತ್ರ

   

ವೆಲ್ಲಿಂಗ್ಟನ್: ದ್ವೀಪ ರಾಷ್ಟ್ರ ವ್ಯಾನುವಾಟುವಿನ ರಾಜಧಾನಿ ಪೋರ್ಟ್‌ ವಿಲ್ಲಾದ ದಕ್ಷಿಣ ಪೆಸಿಫಿಕ್ ಮಹಾಸಾಗರದ ತೀರದಲ್ಲಿ ಮಂಗಳವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರ (ಯುಎಸ್‌ಜಿಎಸ್) ತಿಳಿಸಿದೆ.

ಸಾಗರದ 10 ಕಿ.ಮೀ(6.21 ಮೈಲಿ) ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಯುಎಸ್‌ಜಿಎಸ್‌ ತಿಳಿಸಿದೆ.

ADVERTISEMENT

ರಾಜಧಾನಿ ಪೋರ್ಟ್‌ ವಿಲ್ಲಾದಲ್ಲಿ ವಿದೇಶಿ ರಾಯಭಾರ ಸಿಬ್ಬಂದಿಗೆ ಆತಿಥ್ಯ ವಹಿಸುವ ಕಟ್ಟಡದ ಕಿಟಕಿಗಳು ಮುರಿದಿರುವುದು ಮತ್ತು ಕಾಂಕ್ರೀಟ್ ಕಂಬಗಳು ಕುಸಿದಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ.

ಭೂಕಂಪದ ನಂತರ ಸುಮಾರು 3,30,000 ಜನರಿಗೆ ನೆಲೆಯಾಗಿರುವ 80 ದ್ವೀಪಗಳ ಸಮೂಹವಾದ ವ್ಯಾನುವಾಟುವಿನ ಕೆಲವು ಕರಾವಳಿಗಳಿಗೆ ಸುನಾಮಿ ಅಲೆಗಳ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಭೂಕಂಪದ ನಂತರ ವ್ಯಾನುವಾಟು ಸರ್ಕಾರಿ ವೆಬ್‌ಸೈಟ್‌ಗಳು ಸ್ಥಗಿತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.