ಒಟ್ಟಾವ : ಕ್ರೆಡಿಟ್ ಕಾರ್ಡ್‌ಗಳು, ಚೆಕ್‌ಗಳು ಇರುವ ಅಂಚೆ ಕಳ್ಳತನಕ್ಕೆ ಸಂಬಂಧಿಸಿದಂತೆ ಕೆನಡಾ ಪೊಲೀಸರು ಭಾರತ ಮೂಲದ 8 ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಅವರ ಮೇಲೆ 300ಕ್ಕೂ ಹೆಚ್ಚು ಆರೋಪಗಳನ್ನು ಪೊಲೀಸರು ಹೊರಿಸಿದ್ದು, ಆರೋಪಿಗಳಲ್ಲಿ ಕೆಲವರು ಗಡಿಪಾರಾಗುವ ಅಪಾಯವಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇಲ್ಲಿನ ಪೀಲ್‌ನ ಪೊಲೀಸರು ಶಂಕಿತರಿಂದ ಕ್ರೆಡಿಟ್ ಕಾರ್ಡ್‌ಗಳು ಮತ್ತು ಚೆಕ್‌ಗಳ ರೀತಿಯ 4 ಲಕ್ಷ ಕೆನಡಿಯನ್ ಡಾಲರ್ (2 ಕೋಟಿ 53 ಲಕ್ಷ ರೂಪಾಯಿಗೂ ಹೆಚ್ಚು ) ಮೌಲ್ಯದ 450ಕ್ಕೂ ಹೆಚ್ಚು ಅಂಚೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಶಂಕಿತರನ್ನು ಸುಮನ್‌ಪ್ರೀತ್ ಸಿಂಗ್, ಗುರುದೀಪ್ ಚಟ್ಟಾ, ಜಶನ್‌ದೀಪ್ ಜಟ್ಟಾನಾ, ಹರ್ಮನ್ ಸಿಂಗ್, ಜಸನ್‌ಪ್ರೀತ್ ಸಿಂಗ್, ಮನ್‌ರೂಪ್ ಸಿಂಗ್, ರಾಜ್‌ಬೀರ್ ಸಿಂಗ್ ಮತ್ತು ಉಪೀಂದರ್‌ಜಿತ್ ಸಿಂಗ್ ಎಂದು ಗುರುತಿಸಿದ್ದಾರೆ.
‘ವಸತಿ ಅಂಚೆಪೆಟ್ಟಿಗೆಗಳನ್ನು ಗುರಿಯಾಗಿಸಿಕೊಂಡು ವ್ಯಕ್ತಿಗಳ ಗುಂಪೊಂದು ಕಳವು ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ’ ಎಂದು ಪೊಲೀಸರು ಶುಕ್ರವಾರ ಪ್ರಕಟಣೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.