ADVERTISEMENT

ಕೋವಿಡ್‌–19 | ಚೀನಾದಲ್ಲಿ 26 ಹೊಸ ಪ್ರಕರಣ ಪತ್ತೆ

ರಾಯಿಟರ್ಸ್
Published 21 ಜೂನ್ 2020, 3:21 IST
Last Updated 21 ಜೂನ್ 2020, 3:21 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಬೀಜಿಂಗ್‌: ಚೀನಾದಲ್ಲಿ ಶನಿವಾರ ಒಂದೇ ದಿನ 26 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ.ಈ ಪೈಕಿ ರಾಜಧಾನಿ ಬೀಜಿಂಗ್‌ನಲ್ಲಿ 22 ಹೊಸ ಪ್ರಕರಣಗಳುಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಡಿಸೆಂಬರ್‌ ವೇಳೆಗೆವುಹಾನ್‌ನಲ್ಲಿ ಕಾಣಿಸಿಕೊಂಡಿದ್ದ ಸೋಂಕು ಪ್ರಕರಣಗಳು ಏಪ್ರಿಲ್‌ನಲ್ಲಿ ನಿಯಂತ್ರಣಕ್ಕೆ ಬಂದಿವೆ ಎಂದು ಭಾವಿಸಲಾಗಿತ್ತು. ಆ ಬಳಿಕ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಜೂ.11ರ ಬಳಿಕ ವರದಿಯಾಗಿದ್ದು, ಬೀಜಿಂಗ್‌ ನಗರದಲ್ಲಿ ಏಕಾಏಕಿ 227 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ತಪಾಸಣೆಯಲ್ಲಿ ಸೋಂಕು ದೃಢವಾದರೂ ಲಕ್ಷಣಗಳು ಕಾಣಿಸಿಕೊಳ್ಳದ ಪ್ರಕರಣಗಳು ಸಮಸ್ಯೆ ತಂದೊಡ್ಡಿವೆ. ಹಾಗಾಗಿ ಅಧಿಕಾರಿಗಳು ಸ್ಥಳೀಯ ಮಾರುಕಟ್ಟೆಗಳನ್ನು ಬಂದ್‌ ಮಾಡಿಸಿದ್ದಾರೆ.

ಇದುವರೆಗೆ ಚೀನಾದಲ್ಲಿ 83,378 ಪ್ರಕರಣಗಳು ದೃಢಪಟ್ಟಿವೆ. 4,634 ಮಂದಿ ಮೃತಪಟ್ಟಿದ್ದಾರೆ. 78, 410 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.